ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | RR vs LSG: ರಾಜಸ್ಥಾನಗೆ 197 ರನ್‌ಗಳ ಗೆಲುವಿನ ಗುರಿ

Published 27 ಏಪ್ರಿಲ್ 2024, 13:35 IST
Last Updated 27 ಏಪ್ರಿಲ್ 2024, 16:06 IST
ಅಕ್ಷರ ಗಾತ್ರ

ಲಖನೌ: ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ದೀಪಕ್ ಹೂಡಾ ಅವರ ಶತಕದ ಜೊತೆಯಾಟದ ಬಲದಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯದಲ್ಲಿ ಹೋರಾಟದ ಮೊತ್ತ ಗಳಿಸಿತು. 

ಏಕನಾ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ರಾಹುಲ್ (76; 48ಎ, 4X8, 6X2) ಹಾಗೂ ಹೂಡಾ (50; 31ಎ, 4X7) ಅವರಿಬ್ಬರೂ ಮೂರನೇ ವಿಕೆಟ್ ಜತೆಯಾಟದಲ್ಲಿ 115 ರನ್‌ ಸೇರಿಸಿದರು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 196 ರನ್ ಗಳಿಸಿತು. 

ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟ್ರೆಂಟ್ ಬೌಲ್ಟ್ ಹಾಕಿದ ಮೊದಲ ಓವರ್‌ನ ಮೊದಲೆರಡೂ ಎಸೆತಗಳನ್ನು ಕ್ವಿಂಟನ್ ಡಿ ಕಾಕ್ ಬೌಂಡರಿಗಟ್ಟಿದರು. ಆದರೆ ಮೂರನೇ ಎಸೆತದಲ್ಲಿಯೇ ಕ್ವಿಂಟನ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದ ಟ್ರೆಂಟ್ ‘ಮುಯ್ಯಿ’ ತೀರಿಸಿಕೊಂಡರು. 

ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಮಾರ್ಕಸ್ ಸ್ಟೊಯಿನಿಸ್ ಅವರಿಗೆ ಇಲ್ಲಿ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಸಂದೀಪ್ ಶರ್ಮಾ ಹಾಕಿದ ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಅವರೂ ಕ್ಲೀನ್‌ಬೌಲ್ಡ್ ಆದರು. ಆಗ ತಂಡದ ಮೊತ್ತ ಕೇವಲ 11 ರನ್‌ಗಳಾಗಿದ್ದವು. 

ಇನ್ನೊಂದೆಡೆ ಶಾಂತಚಿತ್ತದಿಂದ ನಿಂತಿದ್ದ ನಾಯಕ ರಾಹುಲ್ ಅವರನ್ನು ಸೇರಿಕೊಂಡ ದೀಪಕ್ ಹೂಡಾ ಆತಂಕ ದೂರ ಮಾಡಿದರು. ರಾಹುಲ್ ಬಿಟ್ಟರೆ ಉಳಿದ ಯಾವ ಬ್ಯಾಟರ್‌ ಕೂಡ ಸಿಕ್ಸರ್‌ ಹೊಡೆಯಲಿಲ್ಲ. ಒಟ್ಟು 20 ಬೌಂಡರಿಗಳಷ್ಟೇ ದಾಖಲಾದವು. ಸ್ಫೋಟಕ ಶೈಲಿಯ ಬ್ಯಾಟರ್ ನಿಕೊಲಸ್ ಪೂರನ್ ವಿಕೆಟ್ ಅನ್ನೂ ಸಂದೀಪ್ ಗಳಿಸಿದರು. 

ಸಂಕ್ಷಿಪ್ತ ಸ್ಕೋರು: ಲಖನೌ ಸೂಪರ್‌ ಜೈಂಟ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 196 (ಕೆ.ಎಲ್. ರಾಹುಲ್ 76, ದೀಪಕ್ ಹೂಡಾ 50, ಆಯುಷ್ ಬದೋನಿ ಔಟಾಗದೆ 18, ಕೃಣಾಲ್ ಪಾಂಡ್ಯ  ಔಟಾಗದೆ 15, ನಿಕೊಲಸ್ ಪೂರನ್ 11, ಸಂದೀಪ್ ಶರ್ಮಾ 31ಕ್ಕೆ2, ಆವೇಶ್ ಖಾನ್ 42ಕ್ಕೆ1, ಅಶ್ವಿನ್ 39ಕ್ಕೆ1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT