ಸಂಭಲ್: ಸಂಭಲ್ನ ಶಾಹಿ ಜಾಮಾ ಮಸೀದಿ ಸಮೀಕ್ಷೆಯ ವಿಸ್ತೃತ ವರದಿಯನ್ನು ಕೋರ್ಟ್ ನೇಮಿಸಿದ್ದ ಆಯುಕ್ತ ರಮೇಶ್ ಸಿಂಗ್ ರಾಘವ್ ಅವರು ಗುರುವಾರ ಚಾಂದೌಸಿ ಕೋರ್ಟ್ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದಾರೆ. ಸಮೀಕ್ಷೆಯನ್ನು ನವೆಂಬರ್ 19 ಮತ್ತು ನ. 24ರಂದು ನಡೆಸಲಾಗಿದೆ.

ಜಾಮಾ ಮಸೀದಿ ಇರುವ ಸ್ಥಳದಲ್ಲಿ ಹಿಂದೆ ಹರಿಹರ ದೇವಸ್ಥಾನ ಇತ್ತು ಎಂಬ ಪ್ರತಿಪಾದನೆಗಳು ಬಂದ ನಂತರದಲ್ಲಿ, ಈ ಮಸೀದಿಯು ಕಾನೂನು ಹೋರಾಟದ ಕೇಂದ್ರಬಿಂದುವಾಗಿ ಪರಿವರ್ತಿತವಾಗಿದೆ.

‘ಕೋರ್ಟ್ ನಿರ್ದೇಶನಕ್ಕೆ ಅನುಗುಣವಾಗಿ ಸಮೀಕ್ಷೆ ನಡೆದಿದೆ. ವಿಡಿಯೊ ಚಿತ್ರೀಕರಣ ಸೇರಿದಂತೆ ಸಮೀಕ್ಷೆಯ ಪೂರ್ಣ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ’ ಎಂದು ರಾಘವ್ ಹೇಳಿದ್ದಾರೆ.

ಭೋಜಶಾಲಾ ಕುರಿತು ಅರ್ಜಿ

ನವದೆಹಲಿ: ಮಧ್ಯಪ್ರದೇಶದಲ್ಲಿ ಇರುವ ಮಧ್ಯಕಾಲೀನ ಯುಗದ ಭೋಜಶಾಲಾ ಪ್ರದೇಶದ ಸಮೀಕ್ಷೆಗೆ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳುವುದಾಗಿ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್.ವಿ.ಎನ್. ಭಟ್ಟಿ ಅವರು ಇರುವ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠವು ಹೇಳಿದೆ.

ಧಾರ್ಮಿಕ ಸ್ಥಳಗಳ ಮೇಲೆ ಹಕ್ಕು ಸ್ಥಾಪಿಸುವ ಅರ್ಜಿಗಳ ವಿಚಾರವಾಗಿ ಹೊಸದಾಗಿ ಆದೇಶ ಹೊರಡಿಸುವಂತಿಲ್ಲ, ಹೊಸ ಅರ್ಜಿಗಳನ್ನು ಪರಿಗಣಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಡಿಸೆಂಬರ್ 12ರಂದು ಅಧೀನ ನ್ಯಾಯಾಲಯಗಳಿಗೆ ಸೂಚನೆ ನೀಡಿರುವುದು, ಭೋಜಶಾಲಾಕ್ಕೆ ಸಂಬಂಧಿಸಿದ ವಿಚಾರಕ್ಕೂ ಅನ್ವಯವಾಗುತ್ತದೆ ಎಂಬಂತೆ ಕಾಣುತ್ತಿದೆ ಎಂದು ಪೀಠವು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.