ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗದ ವಿಧಾನವನ್ನು ಪ್ರಭಾವಿಸಿದ ಕೋವಿಡ್: ಅಧ್ಯಯನ

Last Updated 19 ಮಾರ್ಚ್ 2020, 20:07 IST
ಅಕ್ಷರ ಗಾತ್ರ

ಮುಂಬೈ: ಕೋವಿಡ್–19 ಸೋಂಕು ವೃತ್ತಿಪರರ ಕೆಲಸದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಅಧ್ಯಯನ ವರದಿಯೊಂದು ಅಭಿಪ್ರಾಯಪಟ್ಟಿದೆ.ಅದರಲ್ಲೂ ಮಾರ್ಕೆಟಿಂಗ್, ಸೇಲ್ಸ್, ಆಪರೇಷನ್ ಹಾಗೂ ಉತ್ಪಾದನಾ ವಲಯದ ಉದ್ಯೋಗಿಗಳನ್ನು ಕೋವಿಡ್ ತೀವ್ರವಾಗಿ ಪ್ರಭಾವಿಸಿದೆ ಎಂದು ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿದವರು ಅಭಿಪ್ರಾಯಪಟ್ಟಿದ್ದಾರೆ.

ಈ ಪೈಕಿ ಶೇ 63ರಂದು ಉದ್ಯೋಗಿಗಳು, ಈ ಸಾಂಕ್ರಾಮಿಕ ಪಿಡುಗು ತಮ್ಮ ಕೆಲಸದ ವಿಧಾನದ ಮೇಲೆ ಪ್ರಭಾವಬೀರಿದೆ ಎಂದಿದ್ದಾರೆ. ಸೋಂಕು ವ್ಯಾಪಕವಾಗಿ ಹರಡಿರುವ ಕಾರಣ, ತಮ್ಮ ಉದ್ಯೋಗ ಸಂಬಂಧಿ ಪ್ರಯಾಣವನ್ನು ಕೈಬಿಟ್ಟಿದ್ದೇವೆ ಎಂದು ಶೇ 33ರಷ್ಟು ಜನರು ಹೇಳಿದ್ದಾರೆ. ಟೈಮ್ಸ್ ಜಾಬ್ಸ್ ನಡೆಸಿದ ‘ಕೊರೊನಾ ವೈರಸ್ ಮತ್ತು ಉದ್ಯೋಗದ ಮೇಲೆ ಅದರ ಪ್ರಭಾವ’ ಎಂಬ ಸಮೀಕ್ಷೆಯಲ್ಲಿ ಈ ಅಂಶಗಳು ಉಲ್ಲೇಖಗೊಂಡಿವೆ.

ದೇಶದಾದ್ಯಂತ ವಿವಿಧ ಉದ್ಯಮಗಳಿಗೆ ಸೇರಿದ 1,256 ವೃತ್ತಿಪರರನ್ನು ಸಮೀಕ್ಷೆಗಾಗಿ ಸಂದರ್ಶಿಸಲಾಗಿದೆ. ಐಟಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಆಗಿದೆ ಎಂದು ಶೇ 27ರಷ್ಟು ಜನರು, ರಫ್ತು ಮತ್ತು ಆಮದು ಕ್ಷೇತ್ರದ ಮೇಲೆ ಪರಿಣಾಮ ಉಂಟಾಗಿದೆ ಎಂದು ಶೇ 23ರಷ್ಟು ಜನ, ಆರೋಗ್ಯಸೇವಾ ಕ್ಷೇತ್ರಕ್ಕೂ ಹೊಡೆತ ಬಿದ್ದಿದೆ ಎಂದು ಶೇ 13ರಷ್ಟು ಜನ ಅಭಿಪ್ರಾಯಪಟ್ಟಿದ್ದಾರೆ.

ಈ ಅವಧಿಯಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗಗಳು ಅಪಾಯಕ್ಕೆ ಸಿಲುಕಲಿವೆ ಎಂದು ಶೇ 67ರಷ್ಟು ವೃತ್ತಿಪರರು ಹೇಳಿದ್ದರೆ, ಎಲ್ಲ ಕ್ಷೇತ್ರಗಳಲ್ಲಿ ನೇಮಕಾತಿ ಪ್ರಕ್ರಿಯೆಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಲಿದೆ ಎಂದು ಶೇ 45ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.

‘ಕೊರೊನಾ ವೈರಸ್ ಜಾಗತಿಕ ವ್ಯವಹಾರಕ್ಕೆ ಧಕ್ಕೆ ತಂದಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಸಂಸ್ಥೆಗಳು ತಮ್ಮ ಉದ್ಯೋಗಿಗಳ ಯೋಗಕ್ಷೇಮದ ಕಡೆಗೆ ಒತ್ತು ನೀಡಬೇಕು. ಕಚೇರಿಯ ಕೆಲಸದ ಸ್ಥಳದಲ್ಲಿ ಸಿಬ್ಬಂದಿಯ ಸುರಕ್ಷತೆ ಹಾಗೂ ಆರೋಗ್ಯ ನಿಗಾ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಸರಿಸಬೇಕಿದೆ’ ಎಂದು ಅಧ್ಯಯನ ತಂಡದ ಮುಖ್ಯಸ್ಥ ಸಂಜಯ್ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT