ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿಯಲ್ಲಿ ಭಾರಿ ಮಳೆ: 20 ಇಂಡಿಗೊ ವಿಮಾನ ಸಂಚಾರ ರದ್ದು

Published 29 ಜೂನ್ 2024, 15:18 IST
Last Updated 29 ಜೂನ್ 2024, 15:18 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಇಂಡಿಗೊ ವಿಮಾನಯಾನ ಕಂಪನಿಯ 20 ವಿಮಾನಗಳ ಸೇವೆ ರದ್ದಾಗಿದೆ.

ಭಾರಿ ಮಳೆಗೆ ಟರ್ಮಿನಲ್‌ 1ರ ಚಾವಣಿಯ ಒಂದು ಭಾಗ ಕುಸಿದಿದ್ದರಿಂದ ಈ ಟರ್ಮಿನಲ್‌ ಮೂಲಕ ಕಾರ್ಯಾಚರಣೆ ನಡೆಸುವ ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಹಾಗಾಗಿ, ವಿಮಾನ ಸೇವೆಯಲ್ಲಿ ವ್ಯತ್ಯಯವಾಗಿದೆ. 

ಟರ್ಮಿನಲ್‌ 1ರ ಮೂಲಕ ಇಂಡಿಗೊದ 23 ಹಾಗೂ ಸ್ಲೈಸ್‌ಜೆಟ್‌ ಕಂಪನಿಯ 2 ವಿಮಾನಗಳ ಕಾರ್ಯಾಚರಣೆ ನಿಗದಿಯಾಗಿತ್ತು ಎಂದು ಮೂಲಗಳು ತಿಳಿಸಿವೆ.

ಈ ನಡುವೆಯೇ ಸ್ಪೈಸ್‌ಜೆಟ್‌ ಕಂಪನಿಯು, ಟರ್ಮಿನಲ್‌ 1ರ ಬದಲು ಟರ್ಮಿನಲ್‌ 3ರ ಮೂಲಕ ತನ್ನ ವಿಮಾನ ಸಂಚಾರ ಸೇವೆಯನ್ನು ಮುಂದುವರಿಸಿದೆ. ಟರ್ಮಿನಲ್‌–1ರ ಮೂಲಕ ಕಾರ್ಯಾಚರಣೆ ನಡೆಸುವ ಎಲ್ಲಾ ವಿಮಾನಗಳು ಟರ್ಮಿನಲ್‌ 2 ಮತ್ತು ಟರ್ಮಿನಲ್‌ 3ರ ಮೂಲಕ ಹಾರಾಟ ನಡೆಸಲಿವೆ ಎಂದು ಹೇಳಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT