ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ: ಕೋರ್ಟ್ ಹೊರಗೆ ಸಂಧಾನಕ್ಕೆ ದೆಹಲಿ ಹೈಕೋರ್ಟ್ ಕಳವಳ

ಇಂಥ ಪ್ರಕರಣಗಳು ಕೋರ್ಟ್ ಹೊರಗೆ ಇತ್ಯರ್ಥವಾಗಬಾರದು: ಹೈಕೋರ್ಟ್
Published 9 ಮಾರ್ಚ್ 2024, 0:22 IST
Last Updated 9 ಮಾರ್ಚ್ 2024, 0:22 IST
ಅಕ್ಷರ ಗಾತ್ರ

ನವದೆಹಲಿ: ಅತ್ಯಾಚಾರವೆಸಗಿದ ದುಷ್ಕರ್ಮಿ ಹಾಗೂ ಸಂತ್ರಸ್ತೆ ರಾಜೀ ಸಂಧಾನದ ಮೂಲಕ ಅತ್ಯಾಚಾರ ಪ್ರಕರಣವನ್ನು ಇತ್ಯರ್ಥಗೊಳಿಸಿಕೊಳ್ಳಬೇಕು ಎಂದು ವಿಚಾರಣಾಧೀನ ನ್ಯಾಯಾಧೀಶರೊಬ್ಬರು ಸಲಹೆ ನೀಡಿದ್ದಾರೆ ಎಂಬ ಆರೋಪದ ಸಂಬಂಧ ದೆಹಲಿ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ, ಅತ್ಯಾಚಾರ ಪ್ರಕರಣಗಳನ್ನು ನ್ಯಾಯಾಲಯದ ಹೊರಗೆ ಇತ್ಯರ್ಥ ಮಾಡಲಾಗದು ಎಂದು ಒತ್ತಿಹೇಳಿದೆ. 

ಈ ಮೂಲಕ ಈ ಸಂಬಂಧ ಸಲ್ಲಿಕೆಯಾದ ಎಫ್ಐಆರ್ ಅನ್ನು ರದ್ದುಗೊಳಿಸಬೇಕು ಎಂಬ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. 

ಈ ಕುರಿತು ವಿಚಾರಣೆ ನಡೆದ ನ್ಯಾಯಾಧೀಶ ಸ್ವರಣ ಕಾಂತಾ ಶರ್ಮಾ ಅವರು, ‘ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯರ ಹಕ್ಕುಗಳು ಮತ್ತು ಗೌರವಗಳನ್ನು ಎತ್ತಿಹಿಡಿಯುವುದು ನ್ಯಾಯಾಂಗದ ಹೊಣೆಗಾರಿಕೆಯಾಗಿದೆ. ಇಂಥ ಪ್ರಕರಣದಲ್ಲಿ ರಾಜೀ ಸಂಧಾನದ ಸಲಹೆಗಳು ನ್ಯಾಯಾಧೀಶರಿಂದಲೇ ಬರುವುದು ಅಪರಾಧ ನ್ಯಾಯಾಂಗ ವ್ಯವಸ್ಥೆ ಮತ್ತು ನಿಷ್ಪಕ್ಷಪಾತ ವಿಚಾರಣೆಯ ತತ್ವಗಳಿಗೆ ವಿರುದ್ಧವಾದದ್ದಾಗಿದೆ’ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT