30 ವರ್ಷದ ಮಹಿಳೆ ಸುಮನ್ ಅವರು ಇದೇ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು. ಸುಮನ್‌ಗೆ ಸೋಮವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಾಗ ಪತಿ ಶಾಲು ಕುಮಾರ್ ಆಂಬುಲೆನ್ಸ್ ಸಿಗದೆ, ಮೋಟಾಟ್ ಬೈಕಿಗೆ ಅಳವಡಿಸಿದ್ದ ಗಾಡಿಯಲ್ಲೇ ಪತ್ನಿಯನ್ನು ಆಸ್ಪತ್ರೆಗೆ ಕರೆತಂದಿದ್ದರು. ಹೆರಿಗೆ ವಾರ್ಡ್‌ಗೆ ಹೋಗಿ, ಪತ್ನಿ ಗಾಡಿಯಲ್ಲೇ ಇರುವ ಬಗ್ಗೆ ಮಾಹಿತಿ ನೀಡಿ ದಾಖಲಿಸಿಕೊಳ್ಳುವಂತೆ ವಿನಂತಿಸಿದ್ದರು. ಆದರೆ, ಸಿಬ್ಬಂದಿ ಆಕೆಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ್ದ ಗಾಡಿಯಲ್ಲೇ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದಳು. ಯಾವುದೇ ಸಿಬ್ಬಂದಿ ನೆರವಿಗೆ ಬರಲಿಲ್ಲ ಎಂದು ಶಾಲು ಕುಮಾರ್ ಆರೋಪಿಸಿದ್ದಾರೆ.