ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಭಾರತದಲ್ಲಿ ಹೆಚ್ಚಿದ ಚಳಿ, ದಟ್ಟ ಮಂಜು: ಹೆಪ್ಪುಗಟ್ಟಿದ ನದಿ, ತೊರೆಗಳು

Published 2 ಜನವರಿ 2024, 15:52 IST
Last Updated 2 ಜನವರಿ 2024, 15:52 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಚಳಿ ಹೆಚ್ಚಿದೆ. ಉತ್ತರ ಭಾರತದಲ್ಲಂತೂ ದಟ್ಟ ಮಂಜು, ನೀರು ಹೆಪ್ಪುಗಟ್ಟುವಷ್ಟು ಚಳಿ ಆವರಿಸಿದೆ. ಮಂಗಳವಾರ ಶ್ರೀನಗರದ ದಾಲ್‌ ಸರೋವರದಲ್ಲಿ ಮೇಲ್ಮೈ ನೀರು ಸಂಪೂರ್ಣವಾಗಿ ಮಂಜುಗಡ್ಡೆಯಾಗಿತ್ತು.

ಅನಂತ್‌ನಾಗ್‌, ಗುಲ್‌ಮರ್ಗ್‌ ಪ್ರದೇಶಗಳಲ್ಲಿ ಮೈನಸ್‌ 5.7 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದು, ನದಿ, ತೊರೆಗಳಲ್ಲಿನ ನೀರು ಹೆಪ್ಪುಗಟ್ಟಿತ್ತು.

ದೆಹಲಿಯಲ್ಲಿಯೂ ಚಳಿ ಜೋರಾಗಿದ್ದು, ಮಂಗಳವಾರ ಕನಿಷ್ಠ ತಾಪಮಾನ 8.3 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ನಗರದಾದ್ಯಂತ ದಟ್ಟ ಮಂಜು ಆವರಿಸಿರುವ ಕಾರಣ ದೆಹಲಿಗೆ ಬರುವ 26 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಅಲ್ಲದೆ ದೆಹಲಿ ಗಾಳಿಯ ಗುಣಮಟ್ಟ ಇನ್ನೂ ಸುಧಾರಿಸಿಲ್ಲ. ಮಂಗಳವಾರ ಬೆಳಿಗ್ಗೆ ಗಾಳಿ ಗುಣಮಟ್ಟ ಸೂಚ್ಯಂಕ (ಎಕ್ಯೂಐ) 346ಕ್ಕೆ ತಲುಪಿದೆ.

ಇತ್ತ ರಾಜಸ್ಥಾನದಲ್ಲಿಯೂ ಮಂಜು ಆವರಿಸಿದ್ದ ಕಾರಣ ವಾಹನ ಸಂಚಾರಕ್ಕೆ ಜನರು ಪರದಾಡುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT