ನವದೆಹಲಿ: ‘ಮುಡಾ ಪ್ರಕರಣ ವಿಚಾರದಲ್ಲಿ, ಮೊದಲೇ ಆರೋಪಿಯಾಗಿರುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿಲ್ಲುವರೇ’ ಎಂದು ಬಿಜೆಪಿ ಶನಿವಾರ ಪ್ರಶ್ನಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, ‘ಹಾಲಿ ಮುಖ್ಯಮಂತ್ರಿಯೊಬ್ಬರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಮೊದಲ ಆರೋಪಿಯಾಗಿ ಮಾಡಿರುವ ಅಪರೂಪದ ಪ್ರಕರಣವಿದು. ಇದು ಕಾಂಗ್ರೆಸ್‌ನ ‘ಭ್ರಷ್ಟ ಮುಖವಾಡ’ವನ್ನು ಕಳಚಿದೆ’ ಎಂದರು.
‘ರಾಜಕೀಯ ಕಾರಣಗಳಿಗಾಗಿ ಬಿಜೆಪಿಯು ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ಆರೋಪ ಮಾಡುತ್ತಿದೆ’ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ತ್ರಿವೇದಿ, ‘ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಎಫ್‌ಐಆರ್ ವಿಚಾರದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳ ಪಾತ್ರ ಇಲ್ಲ’ ಎಂದರು.