ಮಂಗಳವಾರ, 16 ಡಿಸೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಶ್ರೇಯಸ್ಸು ಹುಡುಕಿಕೊಂಡು ಬರುವುದರಿಂದ ಸಂತಸ ಸಿಗುವುದು
Published 15 ಡಿಸೆಂಬರ್ 2025, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೆಲಸಗಳೆಲ್ಲ ಇಂದಿನಿಂದ ವೇಗಗತಿಯನ್ನು ಪಡೆದುಕೊಳ್ಳುತ್ತವೆ. ಮದುವೆಯ ವಿಚಾರದಲ್ಲಿ ಆತುರದ ನಿರ್ಧಾರ ತಪ್ಪಿಸಿ. ಅದರ ಬಗ್ಗೆ ಕುಟುಂಬದವರೊಂದಿಗೆ ಮಾತುಕತೆ ನಡೆಸಿ.
ವೃಷಭ
ವ್ಯವಹಾರದಲ್ಲಿ ಜಾಗರೂಕತೆ ಮುಖ್ಯ.ಕೆಲಸದಲ್ಲಿ ಗಡಿಬಿಡಿ ಮಾಡದೆ ಶಾಂತವಾಗಿ ವರ್ತಿಸಿ. ಸಾಯಂಕಾಲದ ವೇಳೆಯಲ್ಲಿ ವಾಯುವಿಹಾರದಿಂದ ಮನಸ್ಸು ಪ್ರಫುಲ್ಲವಾಗುವುದು.
ಮಿಥುನ
ಹೊಸ ಜನರೊಂದಿಗೆ ಮಾತುಕತೆ ನಡೆಸುವುದು ಇದ್ದಲ್ಲಿ ಅದರಿಂದ ಲಾಭ ಹೊಂದುವಿರಿ. ಮಕ್ಕಳ ವಿಚಾರದಲ್ಲಾಗಲಿ ಅಥವಾ ಭವಿಷ್ಯದ ವಿಚಾರದಲ್ಲಾಗಲಿ ಯೋಚನೆಗಳನ್ನು ತೆಗೆದುಹಾಕಿ.
ಕರ್ಕಾಟಕ
ಜೊತೆಗಾರರಲ್ಲಿ ಭಾವನಾತ್ಮಕ ಸಂಬಂಧಗಳು ಉಂಟಾಗಲಿವೆ. ಬಿಡುವಿಲ್ಲದ ಕೆಲಸದ ಮಧ್ಯ ದಲ್ಲೂ ದೇಹಕ್ಕೆ ಬೇಕಾದಷ್ಟು ವಿಶ್ರಾಂತಿ ಕೊಡುವ ಬಗ್ಗೆ ಯೋಚಿಸಿ. ಜಾಗ ಖರೀದಿ ಮಾಡಬಹುದು.
ಸಿಂಹ
ಗೃಹ ಸಾಮಗ್ರಿ ವಸ್ತುಗಳ ಖರೀದಿಯಿಂದ ಖರ್ಚು ಬರುವುದು. ವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಬೇಕಾಗಬಹುದು. ನೀರಿನಿಂದ ಸೋಂಕು ಉಂಟಾಗಬಹುದು.
ಕನ್ಯಾ
ಜಮೀನು ಖರೀದಿಸುವ ಬಗ್ಗೆ ಯೋಚನೆಗಳು ಬರಲಿವೆ. ಅವು ಯೋಚನೆಯಾಗಿಯೇ ಉಳಿಯಲಿದೆ. ಖಾದಿ ಉದ್ಯಮದವರಿಗೆ ಸರ್ಕಾರದಿಂದ ಸಹಾಯ ಸೌಲಭ್ಯ ದೊರೆಯಲಿದೆ.
ತುಲಾ
ಕಾರ್ಯರಂಗದಲ್ಲಿ ಮುನ್ನಡೆಗೆ ಸಹೋದ್ಯೋಗಿಗಳ ನಿರ್ಧಾರಗಳಿಂದ ಸಮಸ್ಯೆ ಇರುತ್ತದೆ. ಯೋಚಿಸಿ ಸ್ವಂತ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ಸಮಸ್ಯೆಗಳ ಸರಮಾಲೆಗಳು ನಿವಾರಣೆಯಾಗಲಿವೆ.
ವೃಶ್ಚಿಕ
ಧಾರ್ಮಿಕವಾಗಿ ಏಕಾಗ್ರತೆ ಹಾಗೂ ಉತ್ತಮ ರೀತಿಯಲ್ಲಿನ ಧ್ಯಾನಗಳಿಂದ ಮಾನಸಿಕವಾಗಿ ಸದೃಢರಾಗುವಿರಿ. ಮಗನೊಡನೆ ಗಹನ ಮಾತುಕತೆ ನಡೆಯುವ ಸಂಭವವಿದೆ.
ಧನು
ಪ್ರಾರಂಭಿಸಿದ ಕೆಲಸಗಳಲ್ಲಿಯೂ ಯಶಸ್ಸು, ಲಾಭ, ಅಭಿವೃದ್ಧಿಗಳಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ಕಹಿಯಾಗುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಪ್ರತಿಸ್ಪರ್ಧಿಗಳು ದೂರಾಗುವರು.
ಮಕರ
ಭೂಮಿಯ ಖರೀದಿಯ ವಿಚಾರದಲ್ಲಿ ಮೋಸವಾಗುವ ಸಾಧ್ಯತೆಗಳಿವೆ. ಸಿವಿಲ್ ಎಂಜಿನಿಯರ್‌ಗಳಿಗೆ ಸಂಸ್ಥೆಯಲ್ಲಿ ಉದ್ಯೋಗ ದೊರೆಯುವುದು. ಅಧಿಕಾರವನ್ನು ಚಲಾಯಿಸಬೇಡಿ.
ಕುಂಭ
ಶ್ರೇಯಸ್ಸು ಹುಡುಕಿಕೊಂಡು ಬರುವುದರಿಂದ ಸಂತಸ ಸಿಗುವುದು. ಮೃಗದ ಚರ್ಮದಿಂದ ವಸ್ತುಗಳನ್ನು ತಯಾರಿಸುವವರಿಗೆ ಬೇಡಿಕೆ ಬರಲಿದೆ. ಷೇರು ಬಂಡವಾಳದಲ್ಲಿ ಲಾಭದ ಸೂಚನೆ ಇದೆ.
ಮೀನ
ಹಣಕಾಸಿನ ವ್ಯವಹಾರ ನಡೆಸುವವರು ನೂತನ ಯೋಜನೆಗಳನ್ನು ಕೆಲವು ಕಡೆಯಲ್ಲಿ ವಿಸ್ತರಿಸಬಹುದು. ನಿರುದ್ಯೋಗಿಗಳು ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಪ್ರಯತ್ನಿಸಿ.
ADVERTISEMENT
ADVERTISEMENT