ಬೆಂಗಳೂರು: ಜೈನ್ ಸಮೂಹ ಸಂಸ್ಥೆಗಳ (ಜೆಜಿಐ) ಒಡೆತನದ ಬೆಂಗಳೂರಿನ ಜೈನ್ ಗ್ಲೋಬಲ್ ಕ್ಯಾಂಪಸ್ನ ಜೆಐಎನ್ ಸ್ಪೋರ್ಟ್ಸ್ನಲ್ಲಿ ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಶಾಲೆಯನ್ನು ಸೋಮವಾರ ಆರಂಭಿಸಲಾಗಿದೆ.

ಮ್ಯಾಂಚೆಸ್ಟರ್ ಸಿಟಿ ಮತ್ತು ಜೆಐಎನ್ ಸ್ಪೋರ್ಟ್ಸ್ನ ಈ ಸಹಯೋಗವು ಉತ್ತಮ ಗುಣಮಟ್ಟದ ತರಬೇತಿ, ಶೈಕ್ಷಣಿಕ ಉತ್ಕೃಷ್ಟತೆ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಸಮಗ್ರ ವಿದ್ಯಾರ್ಥಿ- ಕ್ರೀಡಾಪಟುಗಳ ಅಭಿವೃದ್ಧಿಯ ಮೂಲಕ ಉದಯೋನ್ಮುಖ ಕ್ರೀಡಾಪ್ರತಿಭೆಗಳನ್ನು ಪೋಷಿಸುವ ಗುರಿಯನ್ನು ಹೊಂದಲಾಗಿದೆ.

ಜೆಜಿಐ ಗ್ರೂಪ್ ಅಧ್ಯಕ್ಷ ಡಾ.ಚೆನರಾಜ್ ರಾಯ್ ಚಂದ್ ಮಾತನಾಡಿ, ‘ಮ್ಯಾಂಚೆಸ್ಟರ್ ಸಿಟಿಯೊಂದಿಗಿನ ಪಾಲುದಾರಿಕೆಯು ಭಾರತದ ಅತ್ಯಂತ ಸಮಗ್ರ ಕ್ರೀಡಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ನಮ್ಮ ಪ್ರಯಾಣದಲ್ಲಿ ನಿರ್ಣಾಯಕ ಮೈಲಿಗಲ್ಲಾಗಿದೆ. ಮ್ಯಾಂಚೆಸ್ಟರ್ ಸಿಟಿ ತಂಡದ ವಿಶ್ವದರ್ಜೆಯ ಪರಿಣತಿ ಮತ್ತು ತರಬೇತಿ ತತ್ವಶಾಸ್ತ್ರವನ್ನು ನೇರವಾಗಿ ಭಾರತದಲ್ಲಿರುವ ನಮ್ಮ ಯುವ ಕ್ರೀಡಾಪಟುಗಳಿಗೆ ತರಲು ನಮಗೆ ಅನುವು ಮಾಡಿಕೊಡುತ್ತದೆ’ ಎಂದು ಹೇಳಿದರು.

‘ಮ್ಯಾಂಚೆಸ್ಟರ್ ಸಿಟಿಯ ಫುಟ್ಬಾಲ್ ಶಿಕ್ಷಣ ವಿಧಾನವನ್ನು ಭಾರತದ ಹೆಚ್ಚಿನ ಯುವ ಆಟಗಾರರಿಗೆ ತರಲು ಜೈನ್ ಸ್ಪೋರ್ಟ್ಸ್ನೊಂದಿಗೆ ಪಾಲುದಾರರಾಗಲು ನಾವು ಸಂತೋಷಪಡುತ್ತೇವೆ’ ಎಂದು ಸಿಟಿ ಫುಟ್ಬಾಲ್ ಗ್ರೂಪ್ನ ಫುಟ್ಬಾಲ್ ಶಿಕ್ಷಣ, ಮನರಂಜನೆ ಮತ್ತು ಪಾಲುದಾರ ಕ್ಲಬ್ಗಳ ವ್ಯವಸ್ಥಾಪಕ ನಿರ್ದೇಶಕಿ ಜಾರ್ಜಿನಾ ಬುಸ್ಕೆಟ್ಸ್ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.