ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಿ ಜಗನ್ನಾಥ ದೇವಾಲಯದಲ್ಲಿ ನೂಕುನುಗ್ಗಲು: 10 ಭಕ್ತರು ಅಸ್ವಸ್ಥ

Published 10 ನವೆಂಬರ್ 2023, 11:39 IST
Last Updated 10 ನವೆಂಬರ್ 2023, 11:39 IST
ಅಕ್ಷರ ಗಾತ್ರ

ಪುರಿ: ನೂಕುನುಗ್ಗಲು, ಭಕ್ತರ ದಟ್ಟಣೆ ಹಿನ್ನೆಲೆಯಲ್ಲಿ ಶುಕ್ರವಾರ ಇಲ್ಲಿನ ಪ್ರಸಿದ್ಧ ಶ್ರೀ ಜಗನ್ನಾಥ ದೇವಸ್ಥಾನದಲ್ಲಿ ಸುಮಾರು 10 ಮಂದಿ ಭಕ್ತರು ಅಸ್ವಸ್ಥಗೊಂಡಿದ್ದು ಕುಸಿದುಬಿದ್ದರು. ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.

ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ರಂಜನ್‌ ಕುಮಾರ್ ದಾಸ್ ಅವರು, ‘ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಭಕ್ತರ ಸಂದಣಿಯು ಹೆಚ್ಚಿತ್ತು. ಬೆಳಿಗ್ಗೆ ಈ ಘಟನೆ ನಡೆಯಿತು’ ಎಂದು ತಿಳಿಸಿದರು.

ಆಯಾಸಗೊಂಡು ಕುಸಿದು ಬಿದ್ದವರಲ್ಲಿ ಹೆಚ್ಚಿನವರು ವಯಸ್ಕರು. ಈ ಘಟನೆಯ ಬಳಿಕ ಭಕ್ತರಿಗೆ ಸರಾಗವಾಗಿ ದೇವರ ದರ್ಶನವಾಗುವಂತೆ ಆಡಳಿತವು ವ್ಯವಸ್ಥೆ ಮಾಡಿತು ಎಂದು ತಿಳಿಸಿದರು.

ಪ್ರಾಥಮಿಕ ಮಾಹಿತಿಗಳ ಪ್ರಕಾರ, ದೇವರಿಗೆ ಮಂಗಳಾರತಿ ಆರಂಭವಾಗುತ್ತಿದ್ದಂತೆ ನೂಕುನುಗ್ಗಲು, ದಟ್ಟಣೆ ಹೆಚ್ಚಾಯಿತು. 12ಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡರು. 10 ಜನರಿಗೆ ಸ್ಥಳೀಯವಾಗಿ ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುರಿ ಆಸ್ಪತ್ರೆಗೆ ದಾಖಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT