ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

808 ಎಫ್ಎಂ ಕೇಂದ್ರಗಳ ಇ–ಹರಾಜು ಶೀಘ್ರ: ಅನುರಾಗ್‌ ಠಾಕೂರ್

Published 23 ಜುಲೈ 2023, 11:50 IST
Last Updated 23 ಜುಲೈ 2023, 11:50 IST
ಅಕ್ಷರ ಗಾತ್ರ

ನವದೆಹಲಿ: ರೇಡಿಯೊ ಸಂವಹನದ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಲು ಸರ್ಕಾರವು ದೇಶದ 284 ನಗರಗಳಲ್ಲಿ 808 ಎಫ್‌ಎಂ ರೇಡಿಯೊ ಕೇಂದ್ರಗಳ ಇ–ಹರಾಜು ಪ್ರಕ್ರಿಯೆಯನ್ನು ಶೀಘ್ರದಲ್ಲೇ ನಡೆಸಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ.

ಪ್ರಾದೇಶಿಕ ಸಮುದಾಯ ರೇಡಿಯೊ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಠಾಕೂರ್‌, ರೇಡಿಯೋ ಕೇಂದ್ರಗಳನ್ನು ನಿರ್ವಹಿಸಲು ಪರವಾನಗಿ ಪಡೆಯುವ ಪ್ರಕ್ರಿಯೆಗಳನ್ನು ಸರ್ಕಾರ ಸರಳಗೊಳಿಸಿದೆ ಎಂದು ಹೇಳಿದರು.

ಪ್ರಸುತ್ತ, ದೇಶದಲ್ಲಿ 26 ರಾಜ್ಯಗಳ ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ 113 ನಗರಗಳಲ್ಲಿ ಒಟ್ಟು 388 ಎಫ್‌ಎಂ (FM) ರೇಡಿಯೊ ಕೇಂದ್ರಗಳಿವೆ. ರೇಡಿಯೊ ಸೇವೆ ಇನ್ನಷ್ಟು ವಿಸ್ತರಿಸಲು ಮೂರನೇ ಹಂತದಲ್ಲಿ ದೇಶದ 284 ನಗರಗಳಲ್ಲಿ 808 ಚಾನೆಲ್‌ಗಳ ಇ–ಹರಾಜನ್ನು ಸರ್ಕಾರ ಈಗ ಯೋಜಿಸುತ್ತಿದೆ ಎಂದು ಠಾಕೂರ್‌ ತಿಳಿಸಿದರು.

ರೇಡಿಯೊ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಸರ್ಕಾರ ದೂರದ ಪ್ರದೇಶಗಳಲ್ಲಿ ರೇಡಿಯೊ ಟವರ್‌ಗಳನ್ನು ಸ್ಥಾಪಿಸುತ್ತಿದೆ. ಈ ವರ್ಷದ ಆರಂಭದಲ್ಲಿ, ಸರ್ಕಾರವು ಪ್ರಸಾರ (ಬ್ರಾಡ್‌ಕಾಸ್ಟಿಂಗ್‌) ಮೂಲಸೌಕರ್ಯ ಮತ್ತು ನೆಟ್‌ವರ್ಕ್‌ ಅಭಿವೃದ್ಧಿ ಯೋಜನೆಯನ್ನು ಅನುಮೋದಿಸಿದೆ. ಇದು ದೇಶದಲ್ಲಿ ಆಲ್‌ ಇಂಡಿಯಾ ರೇಡಿಯೊ (AIR) ಎಫ್‌ಎಂ ಟ್ರಾನ್ಸ್‌ಮೀಟರ್‌ಗಳ ವ್ಯಾಪ್ತಿಯನ್ನು ಭೌಗೋಳಿಕ ಪ್ರದೇಶದಿಂದ ಶೇ 59 ರಿಂದ ಶೇ 66ಕ್ಕೆ ಮತ್ತು ಜನಸಂಖ್ಯೆಯಿಂದ ಶೇ 68 ರಿಂದ ಶೇ 80ಕ್ಕೆ ಹೆಚ್ಚಿಸುವ ನೀರಿಕ್ಷೆಯಿದೆ ಎಂದು ಠಾಕೂರ್‌ ವಿವರಿಸಿದರು.

ಈ ಯೋಜನೆಯು ದೂರದ ಬುಡಕಟ್ಟು ಮತ್ತು ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಎಂಟು ಲಕ್ಷಕ್ಕೂ ಹೆಚ್ಚು ಡಿಡಿ ಡಿಶ್‌ ಸೆಟ್‌–ಟಾಪ್‌ ಬಾಕ್ಸ್‌ಗಳ ಉಚಿತ ವಿತರಣೆಯನ್ನು ಕಲ್ಪಿಸುತ್ತದೆ ಎಂದು ಸಚಿವ ಠಾಕೂರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT