ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಗಣಿಗಾರಿಕೆ ಪ್ರಕರಣ | ಆರ್‌ಜೆಡಿ ನಾಯಕ ಸುಭಾಷ್ ಯಾದವ್‌ ಬಂಧಿಸಿದ ಇ.ಡಿ

Published 10 ಮಾರ್ಚ್ 2024, 5:14 IST
Last Updated 10 ಮಾರ್ಚ್ 2024, 5:14 IST
ಅಕ್ಷರ ಗಾತ್ರ

ಪಟ್ನಾ: ಮರಳು ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು (ಇ.ಡಿ) ಆರ್‌ಜೆಡಿ ನಾಯಕ ಸುಭಾಷ್ ಯಾದವ್ ಅವರನ್ನು ಬಂಧಿಸಿದೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಾಗಿರುವ ಪ್ರಕರಣದ ಭಾಗವಾಗಿ ಯಾದವ್ ಮತ್ತು ಇತರರ ಫ್ಲ್ಯಾಟ್‌ಗಳಲ್ಲಿ ಇ.ಡಿ ಅಧಿಕಾರಿಗಳು ಶೋಧ ನಡೆಸಿದ್ದರು.

ಶನಿವಾರ ತಡರಾತ್ರಿ ಯಾದವ್ ಅವರನ್ನು ಬಂಧಿಸಲಾಗಿದ್ದು, ವಿವಿಧೆಡೆ ಸುಮಾರು ₹2.3 ಕೋಟಿ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ.

ಯಾದವ್ ಅವರು ಬಿಹಾರದಲ್ಲಿ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT