ಶ್ರೀನಗರ: ಕಳೆದ ವರ್ಷ ರಚನೆಯಾದ ತಮ್ಮ ಪಕ್ಷದ ನೇತೃತ್ವದ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ರಾತ್ರೋರಾತ್ರಿ ಪರಿವರ್ತನೆ ತರುತ್ತದೆ ಎಂದು ನಿರೀಕ್ಷಿಸುವುದು ಅವಾಸ್ತವಿಕ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಗುರುವಾರ ಹೇಳಿದ್ದಾರೆ.

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 'ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರವು ಪರಿಣಾಮಕಾರಿ ಆಡಳಿತವನ್ನು ರೂಪಿಸಿ, ಪರಿವರ್ತನಾ ಯುಗಕ್ಕೆ ನಾಂದಿ ಹಾಡಿದೆ' ಎಂದಿದ್ದಾರೆ.

'ಸರ್ಕಾರದ ಅಧಿಕಾರಾವಧಿ ಐದು ವರ್ಷಗಳು. ಹೊಸದಾಗಿ ರಚನೆಯಾದ ನಮ್ಮ ಸರ್ಕಾರ ರಾತ್ರೋರಾತ್ರಿ ಈ ಪ್ರದೇಶದಲ್ಲಿ ಪರಿವರ್ತನೆ ತರುತ್ತದೆ ಎಂದು ನಿರೀಕ್ಷಿಸಲಾಗದು. ಕಳೆದ ದಶಕದಲ್ಲಿ ಈ ಪ್ರದೇಶವು ಅನುಭವಿಸಿದ ಅಭಿವೃದ್ಧಿ ಹಿನ್ನಡೆಗಳನ್ನು ಕೇವಲ ಕ್ಷಣಗಳಲ್ಲಿ ಬದಲಿಸಲು ಸಾಧ್ಯವಿಲ್ಲ' ಎಂದು ಅವರು ತಿಳಿಸಿದ್ದಾರೆ.

'ಜಮ್ಮು ಮತ್ತು ಕಾಶ್ಮೀರದ ಜನರು ಕಳೆದ ದಶಕಗಳಿಂದ ಸಂಕಷ್ಟಗಳನ್ನು ಎದುರಿಸಿದ್ದಾರೆ. ತಮ್ಮ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಲು ಸಂಪೂರ್ಣವಾಗಿ ಬದ್ಧವಾಗಿದೆ' ಎಂದೂ ಅವರು ಪುನರುಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.