ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಮರನಾಥ ಯಾತ್ರೆ: ದರ್ಶನ ಮುಗಿಸಿ ಬಂದ ಮೊದಲ ಬ್ಯಾಚ್‌

Published 30 ಜೂನ್ 2024, 16:03 IST
Last Updated 30 ಜೂನ್ 2024, 16:03 IST
ಅಕ್ಷರ ಗಾತ್ರ

ಪಹಲ್‌ಗಾಮ್‌ (ಜಮ್ಮು ಮತ್ತು ಕಾಶ್ಮೀರ): ಪ್ರಸಿದ್ಧ ಅಮರನಾಥ ಯಾತ್ರೆಯು ಆರಂಭಗೊಂಡಿದೆ. ಯಾತ್ರೆಯ ಮೊದಲ ದಿನವಾದ ಶನಿವಾರ ಸುಮಾರು 14 ಸಾವಿರ ಯಾತ್ರಾರ್ಥಿಗಳು ದರ್ಶನ ಮುಗಿಸಿ ಮರಳಿದ್ದಾರೆ. ಇನ್ನೂ ಸಾವಿರಾರು ಮಂದಿ ದರ್ಶನಕ್ಕಾಗಿ ತಮ್ಮ ಯಾತ್ರೆ ಆರಂಭಿಸಿದ್ದಾರೆ.

ಹಿಮದಲ್ಲಿ ರೂಪುಗೊಂಡ ಶಿವಲಿಂಗದ ದರ್ಶನಕ್ಕಾಗಿ ಭಕ್ತಾದಿಗಳಲ್ಲಿ ಉತ್ಸಾಹ ಕಂಡುಬಂದಿತು. ಹಿರಿಯರು ಊರುಗೋಲುಗಳನ್ನು ಹಿಡಿದು ಬೆಟ್ಟ ಹತ್ತುತ್ತಿದ್ದರೆ, ಯುವ ಸಮೂಹವು ಚಾರಣದ ಉಡುಪು ತೊಟ್ಟಿತ್ತು. ಎಲ್ಲರೂ  ಪ್ರಾರ್ಥಿಸುತ್ತಾ ಸಾಗಿದರು. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಸ್ಥಳೀಯರು ಅಂಗಡಿಗಳನ್ನು ತೆರೆದಿದ್ದರು. ಕೆಲವರು ವೈದಕೀಯ ಶಿಬಿರಗಳು, ವಿಶ್ರಾಂತಿ ಕೇಂದ್ರಗಳ ವ್ಯವಸ್ಥೆ ಕಲ್ಪಿಸಿದ್ದರು.

13,827 ಭಕ್ತರ ಮೊದಲ ತಂಡವು ಶನಿವಾರ ದರ್ಶನ ಮುಗಿಸಿ ಹಿಂತಿರುಗಿದೆ.. ಯಾತ್ರಿಕರ ಚಲನವಲನಗಳ ಮೇಲೆ ನಿಗಾ ಇರಿಸಲು ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್‌ (ಆರ್‌ಎಫ್‌ಐಡಿ) ವ್ಯವಸ್ಥೆಯನ್ನು ಕೆಲವು ವರ್ಷಗಳ ಹಿಂದೆ ಪರಿಚಯಿಸಲಾಗಿತ್ತು. ಈ ಬಾರಿಯೂ ಈ ವ್ಯವಸ್ಥೆಯನ್ನು ಮುಂದುವರಿಸಲಾಗಿದೆ. ಯಾತ್ರಿಕರ ಸುರಕ್ಷತೆಗಾಗಿ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT