ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಎನ್‌ಸಿಪಿ ಸೇರಿದ ಏಕನಾಥ್‌ ಖಾಡ್ಸೆ

Last Updated 23 ಅಕ್ಟೋಬರ್ 2020, 12:07 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ಬಿಜೆಪಿ ಮುಖಂಡ ಏಕನಾಥ್‌ ಖಡ್ಸೆ ಅವರು ಶರದ್‌ ಪವಾರ್‌ ಅವರ ಸಮ್ಮುಖದಲ್ಲಿ ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷಕ್ಕೆ (ಎನ್‌ಸಿಪಿ) ಶುಕ್ರವಾರ ಸೇರಿದರು.

ಏಕನಾಥ್‌, ಬುಧವಾರ ಬಿಜೆಪಿ ತೊರೆದಿದ್ದರು.ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಎನ್‌ಸಿಪಿ ಮುಖಂಡ ಜಯಂತ್‌ ಪಾಟೀಲ ಅವರು ಪಕ್ಷದ ಶಿರೋವಸ್ತ್ರ ನೀಡಿ ಏಕನಾಥ್‌ ಅವರನ್ನು ಬರಮಾಡಿಕೊಂಡರು.

ಏಕನಾಥ್‌ ಅವರು ಈ ಹಿಂದೆ ಮಹಾರಾಷ್ಟ್ರ ಸರ್ಕಾರದ ಕಂದಾಯ ಸಚಿವರಾಗಿದ್ದರು. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಕೆಲಸ ಮಾಡಿದ್ದರು.

‘ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಬಲಪಡಿಸಲು ಮೂರು ದಶಕಗಳಿಂದ ಶ್ರಮಿಸಿದ್ದೆ. ಆದರೆ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ನನ್ನ ಜೀವನವನ್ನೇ ಹಾಳು ಮಾಡಲು ಪ್ರಯತ್ನಿಸಿದ್ದರು. ರಾಜಕೀಯವಾಗಿ ನನ್ನನ್ನು ಮುಗಿಸಲು ಮುಂದಾಗಿದ್ದರು’ ಎಂದು ಏಕನಾಥ್, ಬುಧವಾರ‌ ದೂರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT