ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ತಾಯಿ ಹಾಲು ಮಾರಾಟಕ್ಕೆ ಅನುಮತಿ ಇಲ್ಲ: ಎಫ್‌ಎಸ್‌ಎಸ್‌ಎಐ

Published 27 ಮೇ 2024, 16:18 IST
Last Updated 27 ಮೇ 2024, 16:18 IST
ಅಕ್ಷರ ಗಾತ್ರ

ನವದೆಹಲಿ: ತಾಯಿಹಾಲನ್ನು ಮಾರಾಟ ಮಾಡುವುದರ ವಿರುದ್ಧ ಆಹಾರ ಪದಾರ್ಥ ಮಾರಾಟಗಾರರಿಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಎಚ್ಚರಿಕೆ ನೀಡಿದೆ. ತಾಯಿಹಾಲು ಮಾರಾಟ ಮಾಡುವುದಕ್ಕೆ ಅನುಮತಿ ನೀಡಬಾರದು ಎಂದು ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳ ಪರವಾನಗಿ ನೀಡುವ ಸಂಸ್ಥೆಗಳಿಗೆ ಅದು ನಿರ್ದೇಶಿಸಿದೆ.

ಕೆಲ ಆಹಾರ ತಯಾರಿಕಾ ಸಂಸ್ಥೆಗಳು ತೆರೆದ ಮಾರುಕಟ್ಟೆಯಲ್ಲಿ ಎದೆಹಾಲನ್ನು ಮಾರಾಟ ಮಾಡುತ್ತಿವೆ ಎಂಬ ದೂರು ಆಧರಿಸಿ ಎಫ್‌ಎಸ್‌ಎಸ್‌ಎಐ, ‘ಮಾನವ ಹಾಲು ಮತ್ತು ಅದರ ಉತ್ಪನ್ನಗಳ ಅನಧಿಕೃತ ವಾಣಿಜ್ಯೀಕರಣ‘ಕ್ಕೆ ಸಂಬಂಧಿಸಿದಂತೆ ಕೆಲವು ಸಲಹೆಗಳನ್ನು ನೀಡಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿರುವ ಎಫ್‌ಎಸ್‌ಎಸ್‌ಎಐ, ಮಾನವನ ಹಾಲಿನ ವಾಣಿಜ್ಯೀಕರಣ ಚಟುವಟಿಕೆಗಳು ಕಂಡುಬಂದರೆ ಕೂಡಲೇ ಅದಕ್ಕೆ ತಡೆಯೊಡ್ಡಬೇಕು. ಈ ನಿಯಮ ಉಲ್ಲಂಘಿಸುವ ಆಹಾರ ಪದಾರ್ಥ ವಾಣಿಜ್ಯೋದ್ಯಮಿಗಳ ವಿರುದ್ಧ ಎಫ್‌ಎಸ್‌ಎಸ್‌ ಕಾಯ್ದೆ– 2006 ಅಡಿ ಕ್ರಮ ಕೈಗೊಳ್ಳಬೇಕು ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT