ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈ | ಜಿ–20: ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆ ಆಡಳಿತಾಧಿಕಾರಿ ಭಾಗಿ

Published 27 ಜುಲೈ 2023, 16:25 IST
Last Updated 27 ಜುಲೈ 2023, 16:25 IST
ಅಕ್ಷರ ಗಾತ್ರ

ಚೆನ್ನೈ: ಜಿ–20 ಪರಿಸರ ಮತ್ತು ಹವಾಮಾನ ಸುಸ್ಥಿರತೆ ಕುರಿತ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿರುವ ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆಯ (ಯುಎಸ್‌ಎಪಿಎ) ಆಡಳಿತಾಧಿಕಾರಿ ಮೈಕೇಲ್ ಎಸ್‌.ರೇಗನ್‌ ಅವರು ಶಾಲಾ ವಿದ್ಯಾರ್ಥಿಗಳೊಂದಿಗೆ ಗುರುವಾರ ಸಂವಾದ ನಡೆಸಿದರು.

ಹವಾಮಾನ ಬದಲಾವಣೆಯ ಪರಿಣಾಮಗಳು, ಸಮುದ್ರಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅವರು ನಡೆಸಬಹುದಾದ ಪ್ರಯತ್ನಗಳ ಕುರಿತು ಅವರು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.

ಹವಾಮಾನ ಬದಲಾವಣೆಯು ಕರಾವಳಿ ಮೇಲೆ ಬೀರುವ ಪರಿಣಾಮಗಳನ್ನು ತಿಳಿದುಕೊಳ್ಳುವ ಸಲುವಾಗಿ ಆಯೋಜಿಸಿದ್ದ ಸಮುದ್ರ ತೀರ ನಡಿಗೆಯಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕಿದರು ಎಂದು ಮೂಲಗಳು ಹೇಳಿವೆ.

ಅಮೆರಿಕ ಕಾನ್ಸುಲೇಟ್‌, ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್ಸ್‌ಟಿಟ್ಯುಟ್‌ (ತೇರಿ) ಸಹಯೋಗದಲ್ಲಿ ‘ಓಷನ್‌ ಮ್ಯಾಟರ್ಸ್‌’ ಯೋಜನೆ ಭಾಗವಾಗಿ ಈ ಸಂವಾದವನ್ನು ಆಯೋಜಿಸಲಾಗಿತ್ತು.

ಅಮೆರಿಕ ಕಾನ್ಸುಲೇಟ್‌ನ ಸಾರ್ವಜನಿಕ ವ್ಯವಹಾರಗಳ ಅಧಿಕಾರಿ ಜೆನ್ನಿಫರ್ ಬುಲಾಕ್, ಮದ್ರಾಸ್‌ ಕ್ರೊಕೊಡೈಲ್‌ ಬ್ಯಾಂಕ್‌ ಟ್ರಸ್ಟ್‌ನ ಶಿಕ್ಷಣ ಅಧಿಕಾರಿ ಸ್ಟೆಫಿ ಜಾನ್‌, ‘ತೇರಿ’ ಫೆಲೊ ಮತ್ತು ಓಷನ್ ಮ್ಯಾಟರ್ಸ್‌ ಯೋಜನೆಯ ಉಸ್ತುವಾರಿ ಸಲ್ತಾನತ್ ಎಂ.ಕಾಜಿ ಪಾಲ್ಗೊಂಡಿದ್ದರು.

‘ಓಷನ್‌ ಮ್ಯಾಟರ್ಸ್’

ಸಾಗರದ ಸ್ವಾಸ್ಥ್ಯ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ 2022ರಲ್ಲಿ ಅಸ್ತಿತ್ವಕ್ಕೆ ಬಂದ ಸಂಸ್ಥೆಯೇ ‘ಓಷನ್‌ ಮ್ಯಾಟರ್ಸ್’. ಈ ಅಂತರರಾಷ್ಟ್ರೀಯ ವಿಜ್ಞಾನ ಕಾರ್ಯಕ್ರಮಕ್ಕೆ ಅಮೆರಿಕದ ನಾಸಾ, ನ್ಯಾಷನಲ್‌ ಸೈನ್ಸ್‌ ಫೌಂಡೇಷನ್‌ನ ಬೆಂಬಲ ಇದೆ. ಭಾರತದ 200ಕ್ಕೂ ಹೆಚ್ಚು ಶಿಕ್ಷಕರು ಹಾಗೂ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂಸ್ಥೆ ತರಬೇತಿ ನೀಡಿದೆ. ಸಂಸ್ಥೆ ನಡೆಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬಯಸುವ ಪ್ರೌಢಶಾಲಾ ವಿದ್ಯಾರ್ಥಿಗಳು oceanmatters2022@gmail.com ಗೆ ಇ–ಮೇಲ್‌ ಕಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT