ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ: ಶಿವಾಜಿ ಪ್ರತಿಮೆ ಅನಾವರಣದ ವೇಳೆ ಕಲ್ಲು ತೂರಾಟ, ಸಚಿವರಿಗೆ ಪೆಟ್ಟು

Published 19 ಫೆಬ್ರುವರಿ 2024, 14:47 IST
Last Updated 19 ಫೆಬ್ರುವರಿ 2024, 14:47 IST
ಅಕ್ಷರ ಗಾತ್ರ

ಪಣಜಿ: ದಕ್ಷಿಣ ಗೋವಾದ ಗ್ರಾಮವೊಂದರಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ ಅನಾವರಣದ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದ್ದು, ಸಚಿವ ಸುಭಾಷ್‌ ಫಲ್ ದೇಸಾಯಿ ಗಾಯಗೊಂಡಿದ್ದಾರೆ.

ಸೋಮವಾರ ಶಿವಾಜಿ ಅವರ 394ನೇ ಜನ್ಮ ವಾರ್ಷಿಕೋತ್ಸವವಾಗಿತ್ತು. ರಾಜ್ಯದಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆದಿದ್ದವು. ಮಾರ್ಗಾಂವ್ ಪಟ್ಟಣ ಸಮೀದ ಸಾವೊ ಜೋಸ್‌ ಡೇ ಏರಿಯಲ್‌ ಗ್ರಾಮದಲ್ಲಿ ಪ್ರತಿಮೆಯೊಂದನ್ನು ಅನಾವರಣಗೊಳಿಸಿದ್ದು, ಇದಕ್ಕೆ ಗ್ರಾಮದ ಮತ್ತೊಂದು ಗುಂಪು ತಕರಾರು ತೆಗೆದಿತ್ತು.

‘ಪ್ರತಿಮೆ ಸ್ಥಾಪನೆ ವಿರೋಧಿಸಿದ್ದ ಗುಂಪು ಕಲ್ಲುತೂರಾಟ ನಡೆಸಿತು. ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸಲು ನಾನು ಮುಂದಾಗಿದ್ದೆ. ಒಂದು ಹಂತದಲ್ಲಿ ಗುಂಪು ಹಿಂಸೆಗೆ ಇಳಿಯಿತು. ಕಾರಿಗೆ ಹತ್ತುವಾಗ ಕಲ್ಲು ತೂರಲಾಗಿದೆ. ನನಗೆ ಅಲ್ಪಪ್ರಮಾಣ ಪೆಟ್ಟಾಗಿದೆ. ಕೋಮುಸೌಹಾರ್ದ ಕಾಪಾಡುವ ಉದ್ದೇಶದಿಂದ ಈ ಕುರಿತು ಪೊಲೀಸರಿಗೆ ದೂರು ನೀಡಿಲ್ಲ’ ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT