ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲವೇ ಗಂಟೆಗಳಲ್ಲಿ ಹಸೆಮಣೆ ಏರಬೇಕಿದ್ದ ವರ ವಿದ್ಯುತ್ ತಗುಲಿ ಸಾವು

Published 24 ಏಪ್ರಿಲ್ 2024, 7:31 IST
Last Updated 24 ಏಪ್ರಿಲ್ 2024, 7:31 IST
ಅಕ್ಷರ ಗಾತ್ರ

ಕೋಟ(ರಾಜಸ್ಥಾನ): ಮದುವೆಪೂರ್ವ ಹಳದಿ ಕಾರ್ಯಕ್ರಮದ ದಿನ ಹೋಟೆಲ್ ಕೊಠಡಿಯಲ್ಲಿ ವಿದ್ಯುತ್ ತಗುಲಿ 29 ವರ್ಷದ ವರ ಮೃತಪಟ್ಟಿರುವ ಘಟನೆ ರಾಜಸ್ಥಾನದ ಕೋಟ ಜಿಲ್ಲೆಯಲ್ಲಿ ನಡೆದಿದೆ.

ಮದುವೆಗೆ ಕೆಲವೇ ಗಂಟೆಗಳ ಮುನ್ನ ಈ ಅವಘಡ ಸಂಭವಿಸಿದೆ.

ಕೋಟ ಜಿಲ್ಲೆಯ ಕೇಶವಪುರದ ನಿವಾಸಿ ಸೂರಜ್ ಸಕ್ಸೇನಾ ಇಂದು ಸಂಜೆ ವಿವಾಹವಾಗಬೇಕಿತ್ತು. ಮದುವೆಪೂರ್ವ ಕಾರ್ಯಕ್ರಮದ ವೇಳೆ ವರ ಈಜುಕೊಳದ ಕಡೆಗೆ ತೆರಳಿದ್ದರು ಎಂದು ಕುಟುಂಬ ತಿಳಿಸಿದೆ.

ಸೂರಜ್ ಸಕ್ಸೇನಾ ಎಲೆಕ್ಟ್ರಿಕ್ ಕಂಬ ಹಿಡಿದುಕೊಂಡಿದ್ದು, ಕೂಡಲೇ ವಿದ್ಯುತ್ ತಾಗಿದೆ ಎಂದು ನಂತ ಪೊಲೀಸ್ ಠಾಣೆಯ ಠಾಣಾಧಿಕಾರಿ ನಾವಲ್ ಕಿಶೋರ್ ಹೇಳಿದ್ದಾರೆ.

ಪ್ರಜ್ಞಾಹೀನರಾಗಿದ್ದ ಸೂರಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಒಪ್ಪಿಸಲಾಗಿದೆ.

ಹೋಟೆಲ್ ಆಡಳಿತದ ವಿರುದ್ಧ ಐಪಿಸಿ ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT