ಚಂಡೀಗಢ: ಸೋನಿಪತ್ನ ಖಾರ್ಖೋಡಾ ಪ್ರದೇಶದ ಕಾಲುವೆಯಲ್ಲಿ ಹರಿಯಾಣ ಮೂಲದ ಯುವತಿಯ ಶವವು ಪತ್ತೆಯಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದರು.

ಮಾಡೆಲ್ ಆಗಿದ್ದ ಶೀತಲ್ ಅಲಿಯಾಸ್ ಸಿಮ್ಮಿ ಶವ ಅದು ಎಂಬುದು ಗೊತ್ತಾಗಿದೆ. ಪಾಣಿಪತ್ನಲ್ಲಿ ಸಹೋದರಿಯೊಂದಿಗೆ ಈಕೆ ವಾಸವಾಗಿದ್ದರು. ಜೂ.14ರಂದು ಶೂಟಿಂಗ್ಗಾಗಿ ಹೊರಟಿದ್ದ ಶೀತಲ್, ಮನೆಗೆ ಹಿಂದಿರುಗಿರಲಿಲ್ಲ. ಶೀತಲ್ ಕಾಣೆಯಾಗಿದ್ದಾರೆಂದು ಅವರ ಕುಟುಂಬ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದರು.

ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಎಸಿಪಿ ಜೀತ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

ಕಾಲುವೆಯಲ್ಲಿ ಕಾರೊಂದು ಪತ್ತೆಯಾಗಿದ್ದು, ಇದು ಪಾಣಿಪತ್ನ ಇಸ್ತಾನದ ವ್ಯಕ್ತಿಯದ್ದು ಎನ್ನಲಾಗಿದೆ. ಯುವತಿಯು ಆತನೊಂದಿಗೆ ಕಾರಿನಲ್ಲಿದ್ದಳು. ಆ ವ್ಯಕ್ತಿ ಈಜಿಕೊಂಡು ಕಾಲುವೆಯಿಂದ ಪಾರಾಗಿದ್ದಾನೆ. ಯುವತಿಯ ದೇಹದಲ್ಲಿ ಗಾಯದ ಗುರುತುಗಳಿವೆ. ಹೀಗಾಗಿ ಇದು ಕೊಲೆ ಎಂಬ ಅನುಮಾನವಿದೆ. ವಿಚಾರಣೆಗಾಗಿ ವ್ಯಕ್ತಿಯನ್ನು ಬಂಧಿಸಲಾಗುವುದು ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.