ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಡಬ್ಲ್ಯುಎಸ್‌ ಅಡಿ ಪ್ರವೇಶ: ಏಕಸದಸ್ಯ ಪೀಠದ ಆದೇಶಕ್ಕೆ ತಡೆ

Published 5 ಮಾರ್ಚ್ 2024, 14:17 IST
Last Updated 5 ಮಾರ್ಚ್ 2024, 14:17 IST
ಅಕ್ಷರ ಗಾತ್ರ

ನವದೆಹಲಿ: ವಾರ್ಷಿಕ ಆದಾಯವು ₹2.5 ಲಕ್ಷದವರೆಗೆ ಇರುವ ಕುಟುಂಬಗಳ ಮಕ್ಕಳು ‘ಆರ್ಥಿಕವಾಗಿ ದುರ್ಬಲ ವರ್ಗಗಳು’ (ಇಡಬ್ಲ್ಯುಎಸ್) ಕೋಟಾ ಅಡಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಶಾಲೆಗಳಿಗೆ ಪ್ರವೇಶ ಕೋರಬಹುದು ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಹೇಳಿದೆ.

ಸರ್ಕಾರವು ಸಂಬಂಧಪಟ್ಟ ಕಾನೂನಿಗೆ ತಿದ್ದುಪಡಿ ತರುವವರೆಗೂ ₹5 ಲಕ್ಷದವರೆಗೆ ವಾರ್ಷಿಕ ವರಮಾನ ಇರುವವರೂ ಇಡಬ್ಲ್ಯುಎಸ್ ಕೋಟಾ ಅಡಿಯಲ್ಲಿ ಶಾಲೆಗಳಿಗೆ ಪ್ರವೇಶ ಪಡೆಯಬಹುದು ಎಂದು 2023ರ ಡಿಸೆಂಬರ್‌ನಲ್ಲಿ ಏಕಸದಸ್ಯ ಪೀಠವೊಂದು ಆದೇಶ ನೀಡಿತ್ತು. ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ಮನಮೀತ್ ಪಿ.ಎಸ್. ಅರೋರಾ ಅವರು ಇದ್ದ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಕೆಲವು ನಿರ್ದೇಶನಗಳಿಗೆ ಮಂಗಳವಾರ ತಡೆ ನೀಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT