ಡೆಹ್ರಾಡೂನ್: utt

ಸುಮಾರು 3,500 ಲೀಟರ್ ನೀರನ್ನು ತೆಹ್ರಿ ಸರೋವರದಿಂದ ಹೊತ್ತ ಐಎಎಫ್‌ಗೆ ಸೇರಿದ ಹೆಲಿಕಾಪ್ಟರ್ ಜಿಲ್ಲೆಯ ಗಾಜಾ, ಪೋಖ್ರಿ ಮತ್ತು ಕ್ವಿಲಿ ವಲಯದಲ್ಲಿ ನೀರು ಸಿಂಪಡಿಸಿತು ಎಂದು ನರೇಂದ್ರ ನಗರದ ಡಿಎಫ್‌ಒ ಹಾಗೂ ನೋಡಲ್ ಅಧಿಕಾರಿ ಡಿ.ಎಸ್.ಮೀನಾ ಅವರು ತಿಳಿಸಿದರು.

ಈ ವಲಯದಲ್ಲಿ ಆವರಿಸಿರುವ ಬೆಂಕಿಯನ್ನು ನಂದಿಸಲು ಹೆಲಿಕಾಪ್ಟರ್‌ಗಳು ಒಟ್ಟು ನಾಲ್ಕು ಬಾರಿ ನೀರು ಸಿಂಪಡಿಸಿವೆ. ಮಂಗಳವಾರ ಇಂತದೇ ಕಾರ್ಯಾಚರಣೆಯನ್ನು ತೌಲ್‌ಧರ್ ಬ್ಲಾಕ್ ವಲಯದಲ್ಲಿ ಕೈಗೊಳ್ಳಲಾಗುವುದು ಎಂದು ತೆಹ್ರಿ ವಲಯದ ಡಿಎಫ್‌ಒ ಕೊಕೊ ರೋಸ್ ತಿಳಿಸಿದರು.

ಐಎಎಫ್ ಹೆಲಿಕಾಫ್ಟರ್‌ಗಳು ನೀರು ಸಂಗ್ರಹಿಸಲು ಅನುವಾಗುವಂತೆ ತೆಹ್ರಿ ಸರೋವರದಲ್ಲಿ ಬೋಟಿಂಗ್ ಕಾರ್ಯವನ್ನು ರದ್ದುಪಡಿಸಲಾಗಿತ್ತು. ಕುಮಾನ್ ವಲಯದಲ್ಲಿಯೂ ನೀರು ಸಿಂಪಡಿಸಲು ಹೆಲಿಕಾಪ್ಟರ್ ಸಜ್ಜುಗೊಳಿಸಿದ್ದರೂ ಪ್ರತಿಕೂಲ ವಾತಾವರಣದ ಕಾರಣ ಕಾರ್ಯಾಚರಣೆ ನಡೆಯಲಿಲ್ಲ.

ಗರ್‌ವಾಲ್ ಮತ್ತು ಕುಮಾನ್ ವಲಯದಲ್ಲಿ ಅಗ್ನಿ ಆಕಸ್ಮಿಕಕ್ಕೆ ಕಾರಣವಾಗುವ ಸುಮಾರು 40 ಸ್ಥಳಗಳನ್ನು ಗುರುತಿಸಲಾಗಿದೆ. ಈ ವರ್ಷ ಜನವರಿಯಿಂದ ಸುಮಾರು 983 ಕಾಳ್ಗಿಚ್ಚು ಪ್ರಕರಣಗಳು ವರದಿಯಾಗಿದ್ದು, ಒಟ್ಟು 1,292 ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಯಿಂದ ಬಾಧಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.