ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಎಸ್‌ಇ: 10, 12ನೇ ತರಗತಿ ಫಲಿತಾಂಶ ಪ್ರಕಟ, ಬಾಲಕಿಯರೇ ಮೇಲುಗೈ

Published 6 ಮೇ 2024, 7:15 IST
Last Updated 6 ಮೇ 2024, 7:15 IST
ಅಕ್ಷರ ಗಾತ್ರ

ನವದೆಹಲಿ: ಕೌನ್ಸಿಲ್‌ ಫಾರ್‌ ದಿ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೇಟ್‌ ಎಕ್ಸಾಮಿನೇಷನ್ಸ್‌ನ (ಸಿಐಎಸ್‌ಸಿಇ) 10 ಮತ್ತು 12ನೇ ತರಗತಿಯ ಬೋರ್ಡ್‌ ಪರೀಕ್ಷೆಯ ಫಲಿತಾಂಶ ಇಂದು (ಸೋಮವಾರ) ಪ್ರಕಟವಾಗಿದೆ.

2,695 ಶಾಲೆಗಳಲ್ಲಿ ಐಸಿಎಸ್‌ಇ 10ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಆ ಪೈಕಿ 2,223 (ಶೇ 82.48ರಷ್ಟು) ಶಾಲೆಗಳಲ್ಲಿ ಶೇಕಡ 100ರಷ್ಟು ಫಲಿತಾಂಶ ಬಂದಿದೆ.

1,366 ಶಾಲೆಗಳಲ್ಲಿ ಐಎಸ್‌ಇ 12ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಆ ಪೈಕಿ 904 (ಶೇ 66.18ರಷ್ಟು) ಶಾಲೆಗಳಲ್ಲಿ ಶೇಕಡ 100ರಷ್ಟು ಫಲಿತಾಂಶ ಬಂದಿದೆ.

ಐಸಿಎಸ್‌ಇ 10ನೇ ತರಗತಿಯಲ್ಲಿ ಶೇ 99.31ರಷ್ಟು ಬಾಲಕರು ತೇರ್ಗಡೆಯಾದರೆ, ಬಾಲಕಿಯರು ಶೇ 99.65ರಷ್ಟು ಉತೀರ್ಣರಾಗಿದ್ದಾರೆ.

ಐಎಸ್‌ಇ 12ನೇ ತರಗತಿಯಲ್ಲಿ ಶೇ 97.53ರಷ್ಟು ಬಾಲಕರು ತೇರ್ಗಡೆಯಾದರೆ, ಬಾಲಕಿಯರು ಶೇ 98.92ರಷ್ಟು ಉತೀರ್ಣರಾಗಿದ್ದಾರೆ. ಇದರೊಂದಿಗೆ ಐಸಿಎಸ್‌ಇ (10ನೇ ತರಗತಿ) ಮತ್ತು ಐಸಿಎಸ್‌ (12ನೇ ತರಗತಿ) ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.

ಫಲಿತಾಂಶಗಳನ್ನು ಮಂಡಳಿಯ ವೆಬ್‌ಸೈಟ್‌, ಕೆರಿಯರ್‌ ಪೋರ್ಟಲ್‌ ಮತ್ತು ಡಿಜಿಲಾಕರ್‌ನಲ್ಲಿ ವೀಕ್ಷಿಸಬಹುದಾಗಿದೆ.

‘ಈ ವರ್ಷದಿಂದ ಮೆರಿಟ್‌ ಪಟ್ಟಿ ಪ್ರಕಟಿಸುವುದನ್ನು ಕೈಬಿಟ್ಟಿದ್ದೇವೆ. ವಿದ್ಯಾರ್ಥಿಗಳ ನಡುವೆ ಅನಾರೋಗ್ಯಕರ ಸ್ಪರ್ಧೆ ತಪ್ಪಿಸುವುದು ಇದರ ಉದ್ದೇಶ’ ಎಂದು ಸಿಐಎಸ್‌ಸಿಇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕಾರ್ಯದರ್ಶಿ ಜೋಸೆಫ್‌ ಇಮಾನ್ಯುಯೆಲ್‌ ತಿಳಿಸಿದರು.

ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ಕೂಡ ಕಳೆದ ವರ್ಷವೇ ಮೆರಿಟ್‌ ಪಟ್ಟಿ ಪ್ರಕಟಿಸುವುದನ್ನು ಕೈಬಿಟ್ಟಿತ್ತು. ಕೋವಿಡ್ ಸಂದರ್ಭದಲ್ಲಿ ಪರೀಕ್ಷೆಯೇ ನಡೆಯದ ಕಾರಣಕ್ಕೆ ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಎರಡೂ ಮೆರಿಟ್ ಪಟ್ಟಿಯನ್ನು ಪ್ರಕಟಿಸಿರಲಿಲ್ಲ. 

ಸಿಂಗಪುರ, ಇಂಡೊನೇಷ್ಯಾ, ದುಬೈನಲ್ಲಿರುವ ಶಾಲೆಗಳು 10ನೇ ತರಗತಿಯಲ್ಲಿ ಶೇ 100 ಫಲಿತಾಂಶದೊಂದಿಗೆ ಉತ್ತಮ ಸಾಧನೆ ಮಾಡಿವೆ. 12ನೇ ತರಗತಿ ಪರೀಕ್ಷೆಯಲ್ಲಿ ಸಿಂಗಪುರ ಮತ್ತು ದುಬೈನಲ್ಲಿರುವ ಶಾಲೆಗಳು ಈ ಸಾಧನೆಯನ್ನು ಮಾಡಿವೆ.

ಐಸಿಎಸ್‌ಇ ಪರೀಕ್ಷೆಯು (10ನೇ ತರಗತಿ) 60 ವಿವಿಧ ವಿಷಯಗಳಲ್ಲಿ ನಡೆದಿದ್ದು, 20 ಭಾರತೀಯ, 13 ವಿದೇಶಿ ಮತ್ತು 1 ಶಾಸ್ತ್ರೀಯ ಭಾಷೆಯಲ್ಲಿ ನಡೆದಿತ್ತು. ಫೆ.21ರಿಂದ ಮಾರ್ಚ್‌ 28ರವರೆಗೆ ಪರೀಕ್ಷೆ ನಡೆದಿತ್ತು.

ಐಎಸ್‌ಸಿ ಪರೀಕ್ಷೆಯು (12ನೇ ತರಗತಿ) 47 ವಿಷಯಗಳಲ್ಲಿ, 12 ಭಾರತೀಯ, ನಾಲ್ಕು ವಿದೇಶಿ ಹಾಗೂ ಎರಡು ಶಾಸ್ತ್ರೀಯ ಭಾಷೆಗಳಲ್ಲಿ ಫೆ.12ರಿಂದ ಏಪ್ರಿಲ್ 4ರವರೆಗೆ ಪರೀಕ್ಷೆ ನಡೆದಿತ್ತು.

10ನೇ ತರಗತಿ ಪರೀಕ್ಷೆಗೆ 2,695 ಶಾಲೆಗಳ ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 2,223 ಶಾಲೆಗಳು (ಶೇ 82.48) ಶೇ 100ರಷ್ಷು ಸಾಧನೆ ಮಾಡಿವೆ. 12ನೇ ತರಗತಿಗೆ 1,366 ಶಾಲೆಗಳ ವಿದ್ಯಾರ್ಥಿಗಳು ಹಾಜರಾಗಿದ್ದು, 904 ಶಾಲೆಗಳು (ಶೇ 66.18) ಶೇ 100ರಷ್ಟು ಸಾಧನೆ ಮಾಡಿವೆ. ಒಟ್ಟಾರೆ, 10ನೇ ತರಗತಿಗೆ 2.43 ಲಕ್ಷ ವಿದ್ಯಾರ್ಥಿಗಳು, 12ನೇ ತರಗತಿಗೆ 99,901 ವಿದ್ಯಾರ್ಥಿಗಳು ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT