ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ತಿಂಗಳಲ್ಲೇ ಅತ್ಯಧಿಕ: 754 ಕೋವಿಡ್ ಪ್ರಕರಣಗಳು ದಾಖಲು

Last Updated 16 ಮಾರ್ಚ್ 2023, 6:47 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಒಂದೇ ದಿನ ದಾಖಲೆಯ ಸಂಖ್ಯೆಯಲ್ಲಿ 754 ಕೊರೊನಾ ಹೊಸ ಪ್ರಕರಣಗಳು ಗುರುವಾರ ವರದಿಯಾಗಿವೆ. ಕಳೆದ ನಾಲ್ಕು ತಿಂಗಳಿಗೆ ಹೋಲಿಸಿದರೆ ಇದುವೇ ಅತ್ಯಧಿಕ ಸಂಖ್ಯೆಯಾಗಿದ್ದು, ದಿನೇದಿನೇ ಸೋಂಕಿನ ಪ್ರಮಾಣ ಏರುತ್ತಿರುವುದು ಕಂಡುಬರುತ್ತಿದೆ.

ಕಳೆದ ವರ್ಷ, ನವೆಂಬರ್‌ 12ರಂದು ದಾಖಲಾದ 734 ಕೊರೊನಾ ಪ್ರಕರಣಗಳೇ ಇತ್ತೀಚೆಗಿನ ಅಧಿಕ ಸಂಖ್ಯೆಯಾಗಿತ್ತು.

ಇತ್ತೀಚೆಗೆ ಕರ್ನಾಟಕದಲ್ಲಿ ಒಂದು ಸಾವು ಸಂಭವಿಸುವುದರ ಮೂಲಕ ಕೊರೊನಾದಿಂದಾಗಿ ಮೃತರ ಸಂಖ್ಯೆ 5,30,790 ತಲುಪಿದೆ.

ದೇಶದಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಶೇ. 0.01 ಆಗಿದ್ದು, ಚೇತರಿಕೆಯ ಪ್ರಮಾಣ ಶೇ 98.80ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಿಸಿದೆ.

ಈ ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 4,41,57,297 ಇದ್ದು, ಮರಣ ಪ್ರಮಾಣ ಶೇ 1.19 ಆಗಿದೆ.

ದೇಶದಲ್ಲಿ ಈವರೆಗೆ 220.64 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT