ಮುಂಬೈ: 2024ರ ಲೋಕಸಭೆ ಚುನಾವಣೆಯಲ್ಲಿ ಸಾಧ್ಯವಾದಷ್ಟು ಒಗ್ಗಟ್ಟಿನಿಂದಲೇ ಸ್ಪರ್ಧಿಸುವ ನಿರ್ಣಯವನ್ನು ವಿರೋಧಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಶುಕ್ರವಾರ ಕೈಗೊಂಡಿದೆ. ‘ಕೊಟ್ಟು ತೆಗೆದುಕೊಳ್ಳುವ’ ಮುಕ್ತ ಚಿಂತನೆಯೊಂದಿಗೆ ಆದಷ್ಟು ಶೀಘ್ರವಾಗಿ ರಾಜ್ಯವಾರು ಸೀಟು ಹಂಚಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದೂ ಮೈತ್ರಿಕೂಟ ಪ್ರತಿಪಾದಿಸಿದೆ.

ಲೋಕಸಭೆಗೆ ಅವಧಿಪೂರ್ವ ಚುನಾವಣೆ ನಡೆಯಬಹುದು ಎಂಬ ದಟ್ಟ ವದಂತಿ ಹಾಗೂ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಸಾಧ್ಯತೆ ಪರಿಶೀಲನೆಗೆ ಕೇಂದ್ರವು ಸಮಿತಿಯನ್ನು ರಚಿಸಿರುವ ಹೊತ್ತಿನಲ್ಲಿಯೇ ‘ಇಂಡಿಯಾ’ ಈ ಕುರಿತ ಮಹತ್ವದ ನಿರ್ಧಾರವನ್ನು ತಳೆದಿದೆ.

ಸೆಪ್ಟೆಂಬರ್ 30ರ ಒಳಗೆ ರಾಜ್ಯವಾರು ಸೀಟು ಹಂಚಿಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸುವುದು ಸೇರಿದಂತೆ ಪ್ರಮುಖ ತೀರ್ಮಾನ ಕೈಗೊಳ್ಳುವ ಅಧಿಕಾರವುಳ್ಳ 14 ಸದಸ್ಯರ ಸಮನ್ವಯ ಸಮಿತಿಯನ್ನು ಮೈತ್ರಿಕೂಟವು ಇಲ್ಲಿ ನಡೆದ ಸಭೆಯಲ್ಲಿ ರಚಿಸಿತು. ಬಿಜೆಪಿ ನೇತೃತ್ವದ ಎನ್ಡಿಎ ವಿರುದ್ಧ ‘ಸಾಧ್ಯವಾದಷ್ಟು ಒಗ್ಗಟ್ಟಿನಿಂದ’ ಸ್ಪರ್ಧಿಸಲು ನಿರ್ಣಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇಂಡಿಯಾ ಮೈತ್ರಿಕೂಟದ ಅಂಗಪಕ್ಷಗಳು ಆದಷ್ಟು ಶೀಘ್ರದಲ್ಲಿಯೇ ದೇಶದ ವಿವಿಧೆಡೆ ಸಾರ್ವಜನಿಕ ಹಿತಾಸಕ್ತಿ ಮತ್ತು ಮಹತ್ವದ ಅಂಶಗಳಿಗೆ ಸಂಬಂಧಿಸಿ ರ್ಯಾಲಿಗಳನ್ನು ಸಂಘಟಿಸಲು ಹಾಗೂ ಆಯಾ ರಾಜ್ಯಗಳ ಸ್ಥಳೀಯ ಭಾಷೆಗಳಲ್ಲಿ ಪ್ರಾದೇಶಿಕ ಪಕ್ಷಗಳು ‘ಜುಡೇಗಾ ಭಾರತ್, ಜೀತೇಗಾ ಇಂಡಿಯಾ’ ಘೋಷವಾಕ್ಯದೊಂದಿಗೆ ಪ್ರಚಾರಾಂದೋಲನ ನಡೆಸಲು ಮೈತ್ರಿಕೂಟ ನಿರ್ಧರಿಸಿದೆ.

ಈ ಮಧ್ಯೆ, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಸಾಧ್ಯತೆ ಪರಿಶೀಲಿಸಲು ಸಮಿತಿ ರಚಿಸುವ ನಿಲುವು ಉಲ್ಲೇಖಿಸಿ ‘ಎಕ್ಸ್’ ತಾಣದಲ್ಲಿ ಪೋಸ್ಟ್ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಆಡಳಿತಪಕ್ಷವು ಏನೇ ಕಸರತ್ತು ಮಾಡಿದರೂ, ಜನರನ್ನು ಇನ್ನು ಮುಂದೆ ವಂಚಿಸಲಾಗದು. ನಿರಂಕುಶ ಪ್ರಭುತ್ವದ ನಿರ್ಗಮನ ಈಗಾಗಲೇ ಆರಂಭವಾಗಿದೆ’ ಎಂದು ಪ್ರತಿಪಾದಿಸಿದ್ದಾರೆ.

ಸರ್ಕಾರಕ್ಕೆ ನಡುಕ: ಇಲ್ಲಿ ನಡೆದ ‘ಇಂಡಿಯಾ’ ಮೈತ್ರಿಕೂಟದ ಸಭೆಯಲ್ಲಿ ಮಾತನಾಡಿದ ಖರ್ಗೆ, ಇಂಡಿಯಾ ಮೈತ್ರಿಕೂಟದ ಬಲ ಕೇಂದ್ರ ಸರ್ಕಾರಕ್ಕೆ ನಡುಕ ಉಂಟು ಮಾಡಿದೆ. ವಿರೋಧಪಕ್ಷಗಳ ವಿರುದ್ಧ ತನಿಖಾ ಸಂಸ್ಥೆಗಳ ‘ದುರ್ಬಳಕೆಯು’ ಹೆಚ್ಚಾಗಲಿರುವ ಕಾರಣ ವಿರೋಧಪಕ್ಷಗಳು ಕೂಡಾ ‘ಹಗೆತನದ ರಾಜಕಾರಣ’ಕ್ಕೆ ಸಜ್ಜಾಗಬೇಕಾಗಿದೆ ಎಂದು ಹೇಳಿದರು.

ಕೇಂದ್ರದ ವಿರುದ್ಧ ನೇರ ವಾಗ್ದಾಳಿ ನಡೆಸಿದ ಖರ್ಗೆ, ಬಿಜೆಪಿ ಮತ್ತು ಆರ್ಎಸ್ಎಸ್ ಕಳೆದ ಒಂಬತ್ತು ವರ್ಷಗಳಲ್ಲಿ ಹರಡಿರುವ ‘ಕೋಮು ವಿಷ’ವು ಈಗ ಅಮಾಯಕ ರೈಲು ಪ್ರಯಾಣಿಕರು, ಶಾಲಾ ಮಕ್ಕಳ ವಿರುದ್ಧದ ದ್ವೇಷದ ಅಪರಾಧಗಳಾಗಿ ರೂಪತಳೆದಿವೆ ಎಂದರು.

ರೈಲ್ವೆ ಪೊಲೀಸ್ ಕಾನ್ಸ್ಟೆಬಲ್ವೊಬ್ಬರು ರೈಲು ಪ್ರಯಾಣಿಕರ ಮೇಲೆ ಗುಂಡು ಹಾರಿಸಿದ ಪ್ರಕರಣ ಹಾಗೂ ಮುಜಾಫರನಗರದ ಶಾಲೆಯಲ್ಲಿ ಮುಸ್ಲಿಂ ಬಾಲಕನ ಕೆನ್ನೆಗೆ ಹೊಡೆಯಲು ಸಹಪಾಠಿಗಳಿಗೆ ಸೂಚಿಸಿದ ಶಿಕ್ಷಕಿ ನಡೆ ಉಲ್ಲೇಖಿಸಿ ಈ ಮಾತು ಹೇಳಿದರು.

ಇದಕ್ಕೂ ಮುನ್ನ ಪ್ರಾಥಮಿಕ ಪ್ರಸ್ತಾವನೆಯಲ್ಲಿ ಖರ್ಗೆ ಅವರು, ಹಿಂದೆ ಪಟ್ನಾ ಮತ್ತು ಬೆಂಗಳೂರಿನಲ್ಲಿ ನಡೆದ ಮೈತ್ರಿಕೂಟದ ಸಭೆಗಳು ಯಶಸ್ವಿಯಾಗಿವೆ. ಪ್ರಧಾನಿ ತಮ್ಮ ನಂತರದ ಭಾಷಣಗಳಲ್ಲಿ ‘ಇಂಡಿಯಾ’ವನ್ನು ಗುರಿಯಾಗಿಸಿ ಟೀಕಿಸಿರುವುದು, ನಮ್ಮ ಹೆಮ್ಮೆಯ ದೇಶದ ಹೆಸರನ್ನು ಉಗ್ರರ ಸಂಘಟನೆಗಳ ಹೆಸರಿನ ಜೊತೆಗೆ ಸಮೀಕರಿಸಿರುವುದು ಇದಕ್ಕೆ ಉದಾಹರಣೆಯಾಗಿದೆ ಎಂದರು.

ಮುಂದಿನ ತಿಂಗಳುಗಳಲ್ಲಿ ಇಂತಹ ಇನ್ನಷ್ಟು ‘ದಾಳಿ’ಗಳನ್ನು ಎದುರಿಸಲು ನಾವು ಸಜ್ಜಾಗಿರಬೇಕು. ತನಿಖಾ ಸಂಸ್ಥೆಗಳಿಂದ ಹೆಚ್ಚಿನ ದಾಳಿ, ಮುಖಂಡರ ಬಂಧನ ಕೂಡಾ ಸರ್ಕಾರದ ದ್ವೇಷ ರಾಜಕಾರಣದ ಫಲವಾಗಿ ನಡೆಯಲಿದೆ. ನಾವು ಹೆಚ್ಚು ಬಲಗೊಂಡಷ್ಟೂ, ಸರ್ಕಾರ ನಮ್ಮ ನಾಯಕರ ವಿರುದ್ಧದ ದಾಳಿಗಳನ್ನು ಹೆಚ್ಚಿಸಲಿದೆ ಎಂದು ಖರ್ಗೆ ಎಚ್ಚರಿಸಿದರು.

ಮೈತ್ರಿಕೂಟದ ಸಭೆ ಆರಂಭಕ್ಕೂ ಮೊದಲು ಮುಖಂಡರು ಒಟ್ಟಿಗೆ ಫೋಟೊ ತೆಗೆಯಿಸಿಕೊಂಡರು. ಅಲ್ಲದೆ, ಚಂದ್ರಯಾನ–3 ಯಶಸ್ಸಿಗಾಗಿ ‘ಇಸ್ರೊ’ಗೆ ಅಭಿನಂದಿಸುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಕಾಂಗ್ರೆಸ್ ಮುಕ್ತ ಭಾರತ್ ಮಾಡುವುದು ಬ್ರಿಟಿಷರಿಗೆ ಆಗಲಿಲ್ಲ ಇನ್ನು ಮೋದಿ ಹೇಗೆ ಮಾಡುತ್ತಾರೆ? ಅದಾನಿ ಜೊತೆಗಿನ ಗೆಳೆತನದಿಂದ ಕಾಂಗ್ರೆಸ್ ಮುಕ್ತ ಭಾರತ ಸಾಧ್ಯ ಎಂದು ಮೋದಿ ಭಾವಿಸಿರಬಹುದು.
ರಾಹುಲ್ಗಾಂಧಿ, ಸಂಸದ

ಪಾಲ್ಗೊಂಡಿದ್ದ ಪ್ರಮುಖ ನಾಯಕರು

ಕಾಂಗ್ರೆಸ್ನ ಮಾಜಿ ಅಧ್ಯಕ್ಷರಾದ ಸೋನಿಯಾಗಾಂಧಿ ರಾಹುಲ್ಗಾಂಧಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೇರಿ ಹಲವು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಉಳಿದಂತೆ ನ್ಯಾಷನಲ್ ಕಾನ್ಫರೆನ್ಸ್ನ ಫಾರೂಕ್ ಅಬ್ದುಲ್ಹಾ ಒಮರ್ ಅಬ್ದುಲ್ಲಾ ಪಿಡಿಪಿ ಮುಖ್ಯಸ್ಥ ಮೆಹಬೂಬಾ ಮುಫ್ತಿ ಸಿಪಿಎಂನ ಸೀತಾರಾಂ ಯೆಚೂರಿ ಸಿಪಿಐನ ಡಿ.ರಾಜಾ ಸಿಪಿಐ (ಎಂ.ಎಲ್) ಮುಖಂಡ ದೀಪಂಕರ್ ಭಟ್ಟಾಚಾರ್ಯ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ್ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಆರ್ಎಲ್ಡಿಯ ಜಯಂತ್ ಚೌಧರಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಇತರೆ ಪ್ರಮುಖ ನಾಯಕರು.

14 ಸದಸ್ಯರ ‘ಸಮನ್ವಯ ಸಮಿತಿ’ ರಚನೆ

‘ಇಂಡಿಯಾ’ ಮೈತ್ರಿಕೂಟದ ಅಂಗಪಕ್ಷಗಳ ನಡುವೆ ಹೊಂದಾಣಿಕೆ ಕಾಯ್ದುಕೊಳ್ಳುವ ಉದ್ದೇಶದಿಂದ 13 ಸದಸ್ಯರ ಸಮನ್ವಯ ಸಮಿತಿಯನ್ನು ಶುಕ್ರವಾರ ಇಲ್ಲಿ ರಚಿಸಲಾಯಿತು. ಸೀಟು ಹಂಚಿಕೆ ಸೇರಿದಂತೆ ಪ್ರಮುಖ ನಿರ್ಧಾರಗಳಳನ್ನು ಕೈಗೊಳ್ಳುವ ಮೈತ್ರಿಕೂಟದ ಉನ್ನತಾಧಿಕಾರ ಸಮಿತಿಯಾಗಿ ಈ ಸಮಿತಿಯು ಕಾರ್ಯನಿರ್ವಹಿಸಲಿದೆ. ಮೈತ್ರಿಕೂಟದಲ್ಲಿ ಒಟ್ಟು 28 ಪಕ್ಷಗಳಿವೆ. ಸಮಿತಿಯ ಸದಸ್ಯರು: ಕಾಂಗ್ರೆಸ್ ಪಕ್ಷದ ಕೆ.ಸಿ.ವೇಣುಗೋಪಾಲ್ ಎನ್ಸಿಪಿ ನಾಯಕ ಶರದ್ ಪವಾರ್ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆರ್ಜೆಡಿಯ ತೇಜಸ್ವಿಯಾದವ್ ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ ಶಿವಸೇನೆಯ ಸಂಜಯ್ ರಾವುತ್ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಎಎಪಿಯ ರಾಘವ್ ಛಡ್ಡಾ ಸಮಾಜವಾದಿ ಪಕ್ಷದ ಜಾವೇರಿ ಅಲಿ ಖಾನ್ ಜೆಡಿಯುನ ಲಾಲನ್ ಸಿಂಗ್ ಸಿಪಿಐನ ಡಿ.ರಾಜಾ ನ್ಯಾಷನಲ್ ಕಾನ್ಫರೆನ್ಸ್ನ ಒಮರ್ ಅಬ್ದುಲ್ಲಾ ಪಿಡಿಪಿಯ ಮೆಹಬೂಬಾ ಮುಫ್ತಿ ಅವರು ಸಮನ್ವಯ ಸಮಿತಿಯಲ್ಲಿ ಇದ್ದಾರೆ.

ಒಗ್ಗಟ್ಟಿದ್ದರೆ ಬಿಜೆಪಿ ಮಣಿಸಬಹುದು –ರಾಹುಲ್

‘ಇಂಡಿಯಾ’ ಮೈತ್ರಿಪಕ್ಷಗಳು ದೇಶದ ಶೇ 60ರಷ್ಟು ಜನಸಂಖ್ಯೆ ಪ್ರತಿನಿಧಿಸಲಿದ್ದು ಒಗ್ಗಟ್ಟಿನ ಹೋರಾಟವಿದ್ದರೆ ಲೋಕಸಭೆ ಚುನಾವಣೆಯಲ್ಲಿ ಸುಲಭವಾಗಿ ಬಿಜೆಪಿ ಮಣಿಸಬಹುದು ಎಂದು ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿ ಪ್ರತಿಪಾದಿಸಿದರು. ಇಲ್ಲಿ ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಅದಾನಿ ಸಮೂಹದ ವಿರುದ್ಧ ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದರು. ಚೀನಾ ಲಡಾಖ್ನಲ್ಲಿ ಭಾರತದ ಭೂಮಿ ಕಬಳಿಸಿದೆ. ಇದು ಅಲ್ಲಿ ಎಲ್ಲರಿಗೂ ತಿಳಿದಿದೆ ಎಂದು ಪುನರುಚ್ಚರಿಸಿದರು. ಬಡಜನರು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಒಳಗೊಳ್ಳುವ ಸ್ಪಷ್ಟ ಅಭಿವೃದ್ಧಿ ಪಥವನ್ನು ಮೈತ್ರಿಕೂಟ ನಿರ್ಮಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೈತ್ರಿಪಕ್ಷಗಳಲ್ಲಿ ಭಿನ್ನಾಭಿಪ್ರಾಯವಿರುವುದು ಸಹಜ ಎಂದು ಒಪ್ಪಿಕೊಂಡ ಅವರು ಆ ಭಿನ್ನಾಭಿಪ್ರಾಯಗಳನ್ನು ಹೇಗೆ ಬದಿಗಿರಿಸಲಾಗಿದೆ ಎಂಬುದು ನನಗೆ ಸಮಾಧಾನ ನೀಡಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.