ನವದೆಹಲಿ: ಪೂರ್ವ ಲಡಾಖ್‌ನ ಪಾಂಗಾಂಗ್ ಸರೋವರ ಬಳಿ ನಿರ್ಮಾಣವಾಗಿರುವ ಉದ್ವಿಗ್ನ ವಾತಾವರಣ ತಿಳಿಗೊಳಿಸಲು ಭಾರತ ಮತ್ತು ಚೀನಾ ಸೇನಾಧಿಕಾರಿಗಳ ಮಧ್ಯೆ ಮಂಗಳವಾರ ಮತ್ತೊಂದು ಸುತ್ತಿನ ಮಾತುಕತೆ ನಡೆದಿದೆ.

ಗಡಿಯಲ್ಲಿ ನಿರ್ಮಾಣವಾಗಿರುವ ಸಂಘರ್ಷದ ಸ್ಥಿತಿಯನ್ನು ಶಮನಗೊಳಿಸುವ ಕುರಿತು ಎರಡೂ ಕಡೆಯ ಸೇನಾಧಿಕಾರಿಗಳು ಚರ್ಚಿಸಿದರು ಎನ್ನಲಾಗಿದೆ. ನವದೆಹಲಿಯಲ್ಲಿರುವಭೂಸೇನೆಯ ಪ್ರಧಾನ ಕಚೇರಿ ಯಲ್ಲಿ ನಡೆದ ಉನ್ನತ ಮಟ್ಟದ ಸಭೆ ಯಲ್ಲಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರು ಹಿರಿಯ ಸೇನಾಧಿಕಾರಿಗಳ ಜತೆ ಗಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು ಎಂದು ಮೂಲಗಳು ತಿಳಿಸಿವೆ.

ಯುದ್ಧ ವಿಮಾನ ಹಾರಾಟ: ಪಾಂಗಾಂಗ್ ಸರೋವರದ ಸುತ್ತಲಿನ ಕಣಿವೆ ಪ್ರದೇಶ ಮತ್ತು ಪರ್ವತಶ್ರೇಣಿಯಲ್ಲಿ ಸೇನೆಯ ವಿಶೇಷ ತುಕಡಿಯನ್ನು ನಿಯೋಜಿಸಲಾಗಿದೆ. ಎಲ್‌ಎಸಿ ಮತ್ತು ಪಾಂಗಾಂಗ್ ಸುತ್ತಮುತ್ತ ಸದಾ ನಿಗಾ ಇಡುವಂತೆ ಭಾರತೀಯ ವಾಯುಪಡೆಗೆ ಸೂಚಿಸಲಾಗಿದೆ. ಹಲವು ತಿಂಗಳಿಂದ ಲಡಾಖ್ ವಾಯುನೆಲೆಯಲ್ಲಿ ಬೀಡು ಬಿಟ್ಟಿರುವ ಸುಖೋಯ್30 ಎಂಕೆಐ, ಜಾಗ್ವಾರ್, ಮಿರಾಜ್ 2000 ಯುದ್ಧ ವಿಮಾನಗಳು ಎಲ್‌ಎಸಿ ಬಳಿಗಸ್ತು ತಿರುಗುತ್ತಿವೆ. ಗಡಿಯ ಚೀನಾ ಭಾಗ ದಲ್ಲಿಯೂ ಜೆ–20 ಯುದ್ಧ ವಿಮಾನಗಳು ಹಾರಾಟ ನಡೆಸಿರುವ ವರದಿಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.