ಭುವನೇಶ್ವರ್: ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸುವ ಮೂಲಕ ಭಾರತ ತನ್ನ ನಾಗರಿಕರ ಜೀವ ಉಳಿಸಲು ಏನು ಬೇಕಾದರೂ ಮಾಡುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ.
.ಸಿಲ್ಕ್ಯಾರಾ ರಕ್ಷಣಾ ಕಾರ್ಯಾಚರಣೆ: ಯಂತ್ರ ಮೀರಿಸಿದ ‘ಮನುಷ್ಯ ಶ್ರಮ’.
17 ದಿನಗಳ ನಿರಂತರ ರಕ್ಷಣಾ ಕಾರ್ಯಾರಣೆಯ ಮೂಲಕ ಒಡಿಶಾದ ಐವರು ಸೇರಿದಂತೆ 41 ಕಾರ್ಮಿಕರನ್ನು ಸಿಲ್ಕ್ಯಾರಾ ಸುರಂಗದಿಂದ ರಕ್ಷಿತವಾಗಿ ಹೊರತರಲಾಯಿತು.

‘ರಕ್ಷಣಾ ಕಾರ್ಯಾಚರಣೆಯ ಯಶಸ್ವಿಗೊಂಡಿದ್ದು ಕೇಳಿ ನನಗೆ ಸಂತೋಷವಾಯಿತು. ಕಾರ್ಮಿಕರು ಸುರಕ್ಷಿತವಾಗಿ ಮನೆಗೆ ಮರಳುತ್ತಾರೆ ಎನ್ನುವುದು ಒಳ್ಳೆಯ ವಿಷಯ. ಎನ್‌ಡಿಆರ್‌ಎಫ್ ಹಾಗೂ ರಕ್ಷಣಾ ತಂಡಕ್ಕೆ ಪಟ್ನಾಯಕ್ ಧನ್ಯವಾದ‘ ಅರ್ಪಿಸಿದ್ದಾರೆ
.ಸಿಲ್ಕ್ಯಾರಾ ಸುರಂಗದಲ್ಲಿ ಸಾವು ಗೆದ್ದು ಬಂದ ಕಾರ್ಮಿಕರ ಜೊತೆ ಪ್ರಧಾನಿ ಮೋದಿ ಮಾತು.
ಒಡಿಶಾ ರಾಜ್ಯದ ಐವರು ಕಾರ್ಮಿಕರ ಗ್ರಾಮಗಳಲ್ಲಿ ಜನರು ಸಿಹಿ ಹಂಚಿ, ಡೋಲು ಬಾರಿಸಿ ಮೂಲಕ ಮಂಗಳವಾರ ಸಂಭ್ರಮಿಸಿದರು. ಕಾರ್ಮಿಕರ ಕುಟುಂಬ ಸದಸ್ಯರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಂಸ್ಥೆಗಳಿಗೆ ಧನ್ಯವಾದ ತಿಳಿಸಿದ್ದಾರೆ

ಕಾರ್ಮಿಕನ ತಂದೆ ಮಾತನಾಡಿ ‘ನನ್ನ ಮಗನನ್ನು ಮತ್ತೆ ಉತ್ತರಾಖಂಡಕ್ಕೆ ಕೆಲಸಕ್ಕೆ ಕಳುಹಿಸುವುದಿಲ್ಲ, ರಾಜ್ಯದಲ್ಲಿಯೇ ಕೆಲಸ ನೀಡುವಂತೆ‘ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.