ನವದೆಹಲಿ (ಪಿಟಿಐ): ಪ್ರಮುಖ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ, ಬಾಂಧವ್ಯ ವೃದ್ಧಿಗೆ ಪೂರಕವಾಗಿ ಆರು ವಿವಿಧ ಒಪ್ಪಂದಗಳಿಗೆ ಭಾರತ ಮತ್ತು ಮಾಲ್ಡೀವ್ಸ್ ಮಂಗಳವಾರ ಸಹಿ ಹಾಕಿದವು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ದ್ವೀಪ ರಾಷ್ಟ್ರಕ್ಕೆ ಯಾವುದೇ ಬಿಕ್ಕಟ್ಟಿನ ಸಮಯದಲ್ಲಿ ನೆರವಿಗೆ ಧಾವಿಸುವ ಮೊದಲ ದೇಶ ಭಾರತ ಆಗಿರಲಿದೆ’ ಎಂದು ಭರವಸೆ ನೀಡಿದರು.

ಭಾರತಕ್ಕೆ ಭೇಟಿ ನೀಡಿರುವ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಅವರ ಜೊತೆಗೆ ವಿವಿಧ ಸುತ್ತಿನ ಚರ್ಚೆಯ ನಂತರ ಮೋದಿ ಅವರು, ನೆರೆಯ ದೇಶಕ್ಕೆ ₹ 10 ಕೋಟಿ (100 ಮಿಲಿಯನ್ ಡಾಲರ್) ಆರ್ಥಿಕ ನೆರವು ಪ್ರಕಟಿಸಿದರು. ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಈ ನೆರವು ಒದಗಿಸಲಾಗುವುದು ಎಂದು ತಿಳಿಸಿದರು.

‘ಗ್ರೇಟರ್ ಮಾಲೆಯಲ್ಲಿ 4000 ವಸತಿ ನಿರ್ಮಾಣ ಯೋಜನೆಯನ್ನು ಪರಿಶೀಲಿಸಲಾಯಿತು. ಸುಮಾರು 2,000 ವಸತಿ ನಿರ್ಮಿಸಲು ಹೆಚ್ಚುವರಿ ಆರ್ಥಿಕ ನೆರವು ಒದಗಿಸಲು ತೀರ್ಮಾನಿಸಲಾಯಿತು’ ಎಂದು ಈ ಕುರಿತ ಹೇಳಿಕೆಯಲ್ಲಿ ಪ್ರಧಾನಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.