ಇನ್ನು ಭಾರತದ ಒಟ್ಟಾರೆ ಸೋಂಕು ಪ್ರಕರಣ ಅ.16ರ ಹೊತ್ತಿಗೆ 3,40,53,573ಗೆ ತಲುಪಿದ್ದು, ಸದ್ಯ 2,01,632 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ವರೆಗೆ 3,33,99,961 ಗುಣಮುಖರಾಗಿದ್ದು, ಸಾವಿನ ಸಂಖ್ಯೆ 4,51,980 ಕ್ಕೆ ತಲುಪಿದೆ.
ದೇಶದಲ್ಲಿ ಈ ವರೆಗೆ 97,23,77,045 ಮಂದಿಗೆ ಲಸಿಕೆ ಹಾಕಲಾಗಿದೆ. 24 ಗಂಟೆಗಳ ಅವಧಿಯಲ್ಲಿ 8,36,118 ಮಂದಿಗೆ ಲಸಿಕೆ ಹಾಕಲಾಗಿದೆ.
ಕೇರಳದಲ್ಲಿ ಶುಕ್ರವಾರ ಸಂಜೆ ಬಿಡುಗಡೆಯಾದ ಆರೋಗ್ಯ ಇಲಾಖೆ ಬುಲೆಟಿನ್ ಪ್ರಕಾರ ಒಂದು ದಿನದ ಅವಧಿಯಲ್ಲಿ8,867 ಪ್ರಕರಣಗಳು ವರದಿಯಾಗಿವೆ. ಇದು ದೇಶದ ಒಟ್ಟಾರೆ ಪ್ರಕರಣಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು. ಇದೇ ವೇಳೆ ಅಲ್ಲಿ 67 ಮಂದಿ ಮೃತಪಟ್ಟಿದ್ದಾರೆ.