ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಆಧುನೀಕರಣಕ್ಕಾಗಿ ಕೆನ್ಯಾಗೆ ₹ 2,084 ಕೋಟಿ ಹಣಕಾಸು ನೆರವು: ಭಾರತ

Published 5 ಡಿಸೆಂಬರ್ 2023, 13:31 IST
Last Updated 5 ಡಿಸೆಂಬರ್ 2023, 13:31 IST
ಅಕ್ಷರ ಗಾತ್ರ

ನವದೆಹಲಿ: ಕೆನ್ಯಾ ದೇಶದಲ್ಲಿ ಕೃಷಿ ವಲಯದ ಆಧುನೀಕರಣ ಪ್ರಕ್ರಿಯೆ ಜಾರಿಗೊಳಿಸಲು ಒಟ್ಟು ₹ 2084.21 ಕೋಟಿ ಮೊತ್ತವನ್ನು ಸಾಲದ ರೂಪದಲ್ಲಿ ಒದಗಿಸಲಾಗುವುದು ಎಂದು ಭಾರತ ಸೋಮವಾರ ಪ್ರಕಟಿಸಿದೆ. 

ಕೆನ್ಯಾ ಅಧ್ಯಕ್ಷ ವಿಲಿಯಂ ಸಮೊಯಿ ರುಟೊ ಅವರ ಜೊತೆಗಿನ ವಿಸ್ತೃತ ಚರ್ಚೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಸಾಲ ನೆರವು ನೀಡುವ ತೀರ್ಮಾನ ಪ್ರಕಟಿಸಿದರು.

ಮೂರು ದಿನದ ಪ್ರವಾಸಕ್ಕೆ ರುಟೊ ಇಲ್ಲಿಗೆ ಆಗಮಿಸಿದ್ದಾರೆ.

ವಿದೇಶಾಂಗ ನೀತಿಯಡಿ ಭಾರತವು ಆಫ್ರಿಕಾಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಿದೆ. ಕಳೆದೊಂದು ದಶಕದ ಅವಧಿಯಲ್ಲಿ ದ್ವಿಪಕ್ಷೀಯ ಒಪ್ಪಂದವನ್ನು ಸಮಗ್ರವಾಗಿ ವಿಸ್ತರಿಸಿದೆ ಎಂದು ಪ್ರಧಾನಿ ಈ ಕುರಿತು ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ರುಟೊ ಅವರ ಭೇಟಿಯಿಂದ ಉಭಯ ರಾಷ್ಟ್ರಗಳ ನಡುವಣ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯಾಗುವ ಜತೆಗೆ ಆಫ್ರಿಕಾದಲ್ಲಿ ಭಾರತದ ಚಟುವಟಿಕೆಗೆ ಹೊಸ ಆಯಾಮ ನೀಡಲಿದೆ. ಆರ್ಥಿಕ ಸಹಕಾರ ಕುರಿತ ಪೂರ್ಣ ಲಾಭ ಪಡೆಯಲು ಉಭಯ ರಾಷ್ಟ್ರಗಳು ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಳಿವೆ ಎಂದು ಪ್ರಧಾನಿ ತಿಳಿಸಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT