ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು–ಕಾಶ್ಮೀರ: ಟಿಫನ್ ಬಾಕ್ಸ್‌ನಲ್ಲಿ ಇಟ್ಟಿದ್ದ 4 ಐಇಡಿ, 2 ಡಜನ್ ಬುಲೆಟ್ ವಶ

Published 11 ಜನವರಿ 2024, 12:02 IST
Last Updated 11 ಜನವರಿ 2024, 12:02 IST
ಅಕ್ಷರ ಗಾತ್ರ

ರಜೌರಿ/ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಟಿಫನ್ ಬಾಕ್ಸ್‌ನಲ್ಲಿ ಅಳವಡಿಸಲಾಗಿದ್ದ 4 ಸುಧಾರಿತ ಸ್ಫೋಟಕ ಸಾಧನ(ಐಇಡಿ) ಮತ್ತು 2 ಡಜನ್ ಎ.ಕೆ ಸರಣಿಯ ಬಂದೂಕಿನ ಬುಲೆಟ್‌ಗಳನ್ನು ಸಿಆರ್‌ಪಿಎಫ್ ವಶಪಡಿಸಿಕೊಂಡಿದೆ.

ಜಮ್ಮು ವಲಯದ ಗುಪ್ತಚರ ವಿಭಾಗದ ಮಾಹಿತಿ ಆಧರಿಸಿ ಪ್ಯಾರಾ ಮಿಲಿಟರಿ ಪಡೆ ಈ ಪ್ರದೇಶವನ್ನು ಸುತ್ತುವರಿದು ಕಾರ್ಯಾಚರಣೆ ನಡೆಸಿತ್ತು.

ಸಿಆರ್‌ಪಿಎಫ್‌ನ 237ನೇ ಬೆಟಾಲಿಯನ್‌ನ ಸಿ ಕಂಪನಿ ಪಡೆಗಳುಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಹಯತ್‌ಪುರ–ಮಂಜಕೋಟ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆದಿದೆ.

4 ಐಇಡಿಗಳನ್ನು ಟಿಫನ್‌ ಬಾಕ್ಸ್‌ನಲ್ಲಿ ಅಳವಡಿಸಲಾಗಿತ್ತು. ಎ.ಕೆ ಸರಣಿಯ ಬಂದೂಕಿನ 23 ಜೀವಂತ ಗುಂಡುಗಳು, ವೈರ್‌ಲೆಸ್ ಉಪಕರಣ ಮತ್ತು ಟೇಪ್‌ರೆಕಾರ್ಡರ್ ಅನ್ನು ವಶಕ್ಕೆ ಪಡೆಯಲಾಗಿದೆ.

ಪೂಂಚ್–ರಜೌರಿ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಕಳೆದೆರಡು ವರ್ಷಗಳಿಂದ ಇಲ್ಲಿ ಪಾಕಿಸ್ತಾನಿ ಉಗ್ರರ ಉಪಟಳ ಹೆಚ್ಚಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಭದ್ರತೆ ಹೆಚ್ಚಿಸುವ ದೃಷ್ಟಿಯಿಂದ ಈ ವಲಯದಲ್ಲಿ ಕೇಂದ್ರ ಸರ್ಕಾರವು ಸಿಆರ್‌ಪಿಎಫ್‌ ಅನ್ನು ನಿಯೋಜಿಸಿದೆ.

ಸೇನೆ ಮತ್ತು ರಾಷ್ಟ್ರೀಯ ರೈಫಲ್ ಪಡೆಯನ್ನೂ ಸಹ ಈ ವಲಯದಲ್ಲಿ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT