ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್‌ ರಾಜಕೀಯ | ಜೆಎಂಎಂ, ಕಾಂಗ್ರೆಸ್, ಆರ್‌ಜೆಡಿ ಶಾಸಕರು ರೆಸಾರ್ಟ್‌ಗೆ

ಸರಣಿ ಸಭೆ, ರೆಸಾರ್ಟ್‌ನಿಂದ ವಾಪಸ್
Last Updated 28 ಆಗಸ್ಟ್ 2022, 1:57 IST
ಅಕ್ಷರ ಗಾತ್ರ

ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಶಾಸಕ ಸ್ಥಾನ ಡೋಲಾಯಮಾನ ವಾಗಿದ್ದು, ಆಡಳಿತಾರೂಢ ಮೈತ್ರಿ ಕೂಟದ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಅವರು ತಂತ್ರಗಾರಿಕೆ ರೂಪಿಸುತ್ತಿದ್ದಾರೆ.

ಜೆಎಂಎಂ– ಕಾಂಗ್ರೆಸ್–ಆರ್‌ಜೆಡಿ ಪಕ್ಷಗಳ ಶಾಸಕರು ಶನಿವಾರ ಮೂರು ಬಸ್‌ಗಳಲ್ಲಿ ರಾಂಚಿ ಸಮೀಪದ ರೆಸಾರ್ಟ್‌ಗೆ ತೆರಳಿದರು.

ಶನಿವಾರ ಸಂಜೆ ಈ ಎಲ್ಲ ಶಾಸಕರು ರಾಂಚಿಗೆ ಮರಳುವ ಮೂಲಕ, ಬಿಜೆಪಿಯೇತರ ರಾಜ್ಯಗಳ ಅಡಳಿತವಿರುವ ರಾಜ್ಯಗಳಿಗೆ ತೆರಳ ಬಹುದು ಎಂಬ ರಾಜಕೀಯ ನಿರೀಕ್ಷೆಗಳನ್ನು ಹುಸಿಗೊಳಿಸಿದರು.

ಜಾರ್ಖಂಡ್‌ನಲ್ಲಿ ಎದುರಾಗಿರುವ ರಾಜಕೀಯ ಬಿಕ್ಕಟ್ಟಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಹೇಮಂತ್ ಸೊರೇನ್ ಅವರ ನಿವಾಸದಲ್ಲಿ ಶನಿವಾರ ಬೆಳಿಗ್ಗೆಯಿಂದ ಸತತವಾಗಿ ಮೂರು ಸುತ್ತಿನ ಸಭೆಗಳು ನಡೆದವು. ಮೈತ್ರಿಕೂಟದ ಶಾಸಕರು ತಮ್ಮ ಲಗೇಜ್ ಜೊತೆ ಸಭೆಗೆ ಬಂದಿದ್ದರು.

ಸಭೆ ಬಳಿಕ, ಶಾಸಕರು ಖುಂಟಿ ಜಿಲ್ಲೆಯ ಲತರಾತೂ ಸಮೀಪದ ಮೊಮೆಂಟ್ಸ್‌ ರೆಸಾರ್ಟ್‌ಗೆ ತೆರಳಿ ದರು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಆಲಮಗೀರ್ ಆಲಮ್ ಅವರು ಹೇಳಿದ್ದಾರೆ. ‘ಶಾಸಕರನ್ನು ಸೆಳೆಯಲಾಗದು. ಎಲ್ಲರೂ ರಾಂಚಿಯಲ್ಲಿ ಇರಲಿದ್ದಾರೆ’ ಎಂದು ಶುಕ್ರವಾರವಷ್ಟೇ ಅವರು ಹೇಳಿಕೆ ನೀಡಿದ್ದರು. ಪಕ್ಷದ ನಿರ್ದೇಶನವನ್ನು ಪಾಲಿಸುತ್ತೇವೆ ಎಂದು ಶಾಸಕಿ ಶಿಲ್ಪಿ ನೇಹಾ ಟಿರ್ಕೆ ಹೇಳಿದ್ದಾರೆ.

ಶಾಸಕರು ಉಳಿದುಕೊಳ್ಳಲು ಪಶ್ಚಿಮ ಬಂಗಾಳ ಅಥವಾ ಛತ್ತೀಸಗಡದಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ಈ ಹಿಂದೆ ತಿಳಿಸಿದ್ದವು. ಛತ್ತೀಸಗಡದ ಬರಮುಡಾ ಹಾಗೂ ರಾಯಪುರ ಮತ್ತು ಪಶ್ಚಿಮ ಬಂಗಾಳದ ಕೆಲವು ಸ್ಥಳಗಳನ್ನು ಗುರುತಿಸಲಾಗಿದೆ ಎನ್ನಲಾಗಿದೆ. ಶಾಸಕರನ್ನು ರಾಜ್ಯದಿಂದ ಹೊರಗೆ ಕಳುಹಿಸುವ ಆಯ್ಕೆಯನ್ನು ಮುಕ್ತವಾಗಿರಿಸಲಾಗಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜೆಎಂಎಂ ಮೂಲಗಳು ತಿಳಿಸಿವೆ.

‘ಅಗತ್ಯಬಿದ್ದರೆ ಎಲ್ಲ ಶಾಸಕರನ್ನು ಒಂದೇ ಕಡೆಗೆಕಳುಹಿಸಲಾಗುತ್ತದೆ. ಶಾಸಕರ ಸಂಖ್ಯಾಬಲ ಕಾಯ್ದುಕೊಳ್ಳುವುದು ಈಗಿನ ತುರ್ತು. ಹೀಗಾಗಿ ರೆಸಾರ್ಟ್ರಾ ಜಕಾರಣ ಅಗತ್ಯ’ ಎಂದು ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT