ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ | ಅಂಗನವಾಡಿ ಸಿಬ್ಬಂದಿ ವೇತನ ಏರಿಕೆ

Published 28 ಜನವರಿ 2024, 13:36 IST
Last Updated 28 ಜನವರಿ 2024, 13:36 IST
ಅಕ್ಷರ ಗಾತ್ರ

ತಿರುವನಂತಪುರ: ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರ ಮಾಸಿಕ ವೇತನದಲ್ಲಿ ₹1000ದವರೆಗೆ ಹೆಚ್ಚಳ ಮಾಡುವುದಾಗಿ ಕೇರಳ ಸರ್ಕಾರ ಭಾನುವಾರ ಘೋಷಿಸಿತು. 

ಹತ್ತು ವರ್ಷಗಳಿಗಿಂತ ಹೆಚ್ಚು ಸೇವಾ ಅನುಭವ ಇರುವ ಕಾರ್ಯಕರ್ತರು ಹಾಗೂ ಸಹಾಯಕರ ವೇತನವನ್ನು ₹ 1000ದಷ್ಟು ಹೆಚ್ಚಿಸಲಾಗುವುದು. ಉಳಿದವರ ವೇತನದಲ್ಲಿ ₹ 500 ಏರಿಕೆಯಾಗಲಿದೆ ಎಂದು ಕೇರಳ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಹೇಳಿಕೆಯಲ್ಲಿ ತಿಳಿಸಿದರು. 

ಸದ್ಯಕ್ಕೆ ಅಂಗನವಾಡಿ ಕಾರ್ಯಕರ್ತರು ತಿಂಗಳಿಗೆ ₹ 12 ಸಾವಿರ ಹಾಗೂ ಸಹಾಯಕರು ₹ 8 ಸಾವಿರ ವೇತನ ಪಡೆಯುತ್ತಿದ್ದಾರೆ. ಒಟ್ಟು 60,232 ಮಂದಿಗೆ ವೇತನ ಹೆಚ್ಚಳದ ಲಾಭ ದೊರೆಯಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT