ಕೊಚ್ಚಿ: ಮಲಯಾಳಂ ನಟ ಕೊಲ್ಲಂ ತುಳಸಿ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ಗುರುವಾರ ತಳ್ಳಿಹಾಕಿದೆ.

ಶಬರಿಮಲೆಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಎನ್‌ಡಿಎ ರಾಜ್ಯದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ, ಕೊಲ್ಲಂ ಅವರು ಮಹಿಳೆಯರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿದ್ದಾರೆ.

ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಅವರಿಗೆ ನ್ಯಾಯಮೂರ್ತಿ ರಾಜ ವಿಜಯವರ್ಧನ ನಿರ್ದೇಶನ ನೀಡಿದರು.

ಕೊಲ್ಲಂನ ಸೆಷನ್ಸ್ ಕೋರ್ಟ್ ಜಾಮೀನು ನಿರಾಕರಿಸಿದ ನಂತರ ಹೈಕೋರ್ಟ್‌ನಲ್ಲಿ ಕೊಲ್ಲಂ ಅರ್ಜಿ ಸಲ್ಲಿಸಿದ್ದರು.

‘ಶಬರಿಮಲೆ ದೇವಸ್ಥಾನ ಪ್ರವೇಶಿಸುವ ಮಹಿಳೆಯರನ್ನು ಅರ್ಧರ್ಧ ಸೀಳಿ ಹಾಕಬೇಕು.ಅದರಲ್ಲಿ ಅರ್ಧ ಭಾಗವನ್ನು ದೆಹಲಿಗೆ ಕಳುಹಿಸಿ, ಇನ್ನರ್ಧ ಭಾಗವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿಯತ್ತ ಎಸೆಯಬೇಕು ಎಂದು ಅವರು ಕೆಲ ದಿನಗಳ ಹಿಂದೆ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.