ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಗಂಗಾ ಸ್ನಾನ ಬಡತನ ನೀಗಿಸುವುದೇ?: ಖರ್ಗೆ ಹೇಳಿಕೆಗೆ ಬಿಜೆಪಿ ತಿರುಗೇಟು

Published : 27 ಜನವರಿ 2025, 15:31 IST
Last Updated : 27 ಜನವರಿ 2025, 15:31 IST
ಫಾಲೋ ಮಾಡಿ
Comments
ಬಿಜೆಪಿ ನಾಯಕರು ಕ್ಯಾಮೆರಾಗಳಿಗೆ ಪೋಸ್‌ ನೀಡುವ ಉದ್ದೇಶದಿಂದ ಗಂಗಾ ನದಿಯಲ್ಲಿ ಸ್ನಾನ ಮಾಡಲು ಪೈಪೋಟಿ ನಡೆಸುತ್ತಿದ್ದಾರೆ
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
ಖರ್ಗೆ ಅವರ ಹೇಳಿಕೆಯಿಂದ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ಸನಾತನ ಧರ್ಮದ ವಿರುದ್ಧದ ಇಂತಹ ಹೇಳಿಕೆ ನಾಚಿಕೆಗೇಡಿನದ್ದು
ಸಂಬಿತ್‌ ಪಾತ್ರ ಬಿಜೆಪಿ ರಾಷ್ಟ್ರೀಯ ವಕ್ತಾರ
ರಾಹುಲ್‌ ಸೋನಿಯಾ ಕ್ಷಮೆಯಾಚಿಸಲಿ: ಬಿಜೆಪಿ
ನವದೆಹಲಿ: ಖರ್ಗೆ ಅವರು ಸಾವಿರಾರು ವರ್ಷಗಳಿಂದ ಸನಾತನ ನಂಬಿಕೆಯ ಸಂಕೇತವಾಗಿರುವ ಮಹಾಕುಂಭದ ಬಗ್ಗೆ ಜನರಿಗೆ ಇರುವ ಗೌರವವನ್ನು ‘ಅಪಹಾಸ್ಯ’ ಮಾಡಿದ್ದಾರೆ ಎಂದು ಬಿಜೆಪಿ ಸಂಸದ ಮತ್ತು ಪಕ್ಷದ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ವಾಗ್ದಾಳಿ ನಡೆಸಿದ್ದಾರೆ.  ಪಕ್ಷವು ಇಂತಹ ಸನಾತನ ವಿರೋಧಿ ಚಿಂತನೆಯನ್ನು ಹೇಗೆ ಹೊಂದಿದೆ ಎಂಬುದಕ್ಕೆ ಕಾಂಗ್ರೆಸ್‌ ಮತ್ತು ಅದರ ನಾಯಕ ರಾಹುಲ್ ಗಾಂಧಿ ವಿವರಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ‘ಇಂತಹ ಹೇಳಿಕೆಗಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಇಡೀ ದೇಶ ಮತ್ತು ಸನಾತನ ಧರ್ಮವನ್ನು ನಂಬುವ ಪ್ರತಿಯೊಬ್ಬ ವ್ಯಕ್ತಿಯ ಕ್ಷಮೆಯಾಚಿಸಬೇಕು’ ಎಂದೂ ಒತ್ತಾಯಿಸಿದ್ದಾರೆ.  ‘ಇಫ್ತಾರ್ ಕೂಟದಲ್ಲಿ ಭಾಗವಹಿಸುವುದರಿಂದ ಬಡತನ ನಿರ್ಮೂಲನೆಯಾಗುತ್ತದೆಯೇ ಎಂದು ಕೇಳುವಷ್ಟು ಧೈರ್ಯ ರಾಹುಲ್‌ ಮತ್ತು ಸೋನಿಯಾ ಅವರಿಗೆ ಇದೆಯೇ’ ಎಂದು ಪ್ರಶ್ನಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT