ಹೈದರಾಬಾದ್: ಬಿಆರ್ಎಸ್ ಕಾರ್ಯಾಧ್ಯಕ್ಷ ಕೆ.ಟಿ ರಾಮರಾವ್ ಅವರು ದೂರವಾಣಿ ಕದ್ದಾಲಿಕೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಗಾಗಿ ತೆಲಂಗಾಣ ವಿಶೇಷ ತನಿಖಾ ತಂಡದ (ಎಸ್ಐಟಿ) ಮುಂದೆ ಶುಕ್ರವಾರ ಹಾಜರಾದರು.

ಬಿಆರ್ಎಸ್ ಆಡಳಿತದ ಅವಧಿಯಲ್ಲಿ ನಡೆದಿದೆ ಎನ್ನಲಾದ ದೂರವಾಣಿ ಕದ್ದಾಲಿಕೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಸ್ಐಟಿ ರಾಮರಾವ್ ಅವರಿಗೆ ಗುರುವಾರ ನೋಟಿಸ್ ಜಾರಿ ಮಾಡಿತ್ತು. ರಾಮರಾವ್ ಅವರ ಸಂಬಂಧಿ, ಬಿಆರ್ಎಸ್ ಶಾಸಕ ಟಿ. ಹರೀಶ್ ರಾವ್ ಅವರನ್ನು ಜನವರಿ 20ರಂದು ಎಸ್ಐಟಿ ವಿಚಾರಣೆಗೆ ಒಳಪಡಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿ, ತೆಲಂಗಾಣ ವಿಶೇಷ ಗುಪ್ತಚರ ದಳದ(ಎಸ್ಐಬಿ) ಮಾಜಿ ಡಿಎಸ್ಪಿ ಟಿ. ಪ್ರಭಾಕರ್ ರಾವ್ ಮತ್ತು ಮೂವರು ಅಧಿಕಾರಿಗಳನ್ನು ಎಸ್ಐಟಿ ಕಳೆದ ಮಾರ್ಚ್ನಲ್ಲಿ ಬಂಧಿಸಿತ್ತು. ಬಳಿಕ ಅವರಿಗೆ ಜಾಮೀನು ದೊರೆತಿದೆ.