ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಕ್ಕಾಗಿ ಭೂಮಿ ಹಗರಣ: 9 ಗಂಟೆಗಳ ಕಾಲ ಲಾಲು ವಿಚಾರಣೆ ನಡೆಸಿದ ಇ.ಡಿ

Published 29 ಜನವರಿ 2024, 15:53 IST
Last Updated 29 ಜನವರಿ 2024, 15:53 IST
ಅಕ್ಷರ ಗಾತ್ರ

ಪಟ್ನಾ: ‘ಉದ್ಯೋಗಕ್ಕಾಗಿ ಭೂಮಿ ಹಗರಣ’ಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರು ಸೋಮವಾರ ಜಾರಿ ನಿರ್ದೇಶನಾಲಯದ (ಇ.ಡಿ) ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದರು.

ಲಾಲು ತಮ್ಮ ಪುತ್ರಿ ಮೀಸಾ ಭಾರತಿ ಅವರೊಂದಿಗೆ ಬೆಳಿಗ್ಗೆ 11ರ ಸುಮಾರಿಗೆ ಇ.ಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು. ಸಂಜೆ 6.50ಕ್ಕೆ ಹೊರಬಂದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಯಾವುದೇ ತನಿಖಾ ಸಂಸ್ಥೆ ನಮ್ಮ ಕುಟುಂಬದ ಸದಸ್ಯರನ್ನು ವಿಚಾರಣೆಗೆ ಕರೆದಾಗಲೆಲ್ಲಾ, ನಾವು ಅಲ್ಲಿಗೆ ಹೋಗಿ ಸಹಕರಿಸುತ್ತೇವೆ. ಪ್ರತಿಯೊಂದು ಪ್ರಶ್ನೆಗೂ ಉತ್ತರಿಸುತ್ತೇವೆ. ಅನಾರೋಗ್ಯದ ಕಾರಣ ಅವರಿಗೆ (ಲಾಲು) ಇನ್ನೊಬ್ಬರ ಸಹಾಯವಿಲ್ಲದೆ ನಡೆದಾಡಲು ಕಷ್ಟವಾಗುತ್ತದೆ. ಆದ್ದರಿಂದ ಎಲ್ಲಿಗಾದರೂ ಹೋಗುವಾಗ ಒಬ್ಬರು ಅವರ ಜತೆಯಲ್ಲಿ ಇರಬೇಕು’ ಎಂದು ಇ.ಡಿ ಕಚೇರಿಗೆ ಪ್ರವೇಶಿಸುವ ಮುನ್ನ ಮೀಸಾ ಅವರು ಸುದ್ದಿಗಾರರಿಗೆ ತಿಳಿಸಿದರು.

ಆದರೆ ಲಾಲು ಜತೆ ಇ.ಡಿ ಕಚೇರಿಯ ಒಳಗೆ ಪ್ರವೇಶಿಸಲು ಮೀಸಾ ಅವರಿಗೆ ಅಧಿಕಾರಿಗಳು ಅನುಮತಿ ನಿರಾಕರಿಸಿದರು ಎಂದು ಲಾಲು ಅವರ ಇನ್ನೊಬ್ಬ ಪುತ್ರಿ, ಸಿಂಗಪುರದಲ್ಲಿ ನೆಲೆಸಿರುವ ರೋಹಿಣಿ ಆಚಾರ್ಯ ಹೇಳಿದ್ದಾರೆ.

‘ನನ್ನ ತಂದೆಯ ಆರೋಗ್ಯ ಸ್ಥಿತಿ ಹೇಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಇನ್ನೊಬ್ಬರ ನೆರವಿಲ್ಲದೆ ಅವರಿಗೆ ನಡೆದಾಡಲು ಆಗುವುದಿಲ್ಲ. ನನ್ನ ಸಹೋದರಿ (ಭಾರತಿ) ಮನವಿ ಮಾಡಿದರೂ, ತಂದೆಯ ಜತೆ ಒಳಗೆ ಹೋಗಲು ಬಿಡಲಿಲ್ಲ. ಇ.ಡಿ ಅಧಿಕಾರಿಗಳು ಅಮಾನವೀಯವಾಗಿ ವರ್ತಿಸಿದ್ದಾರೆ’ ಎಂದು ‘ಎಕ್ಸ್‌’ನಲ್ಲಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT