ಭೋಪಾಲ್: ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದ ಪ್ರತಿಭಟನಾ ಸಮಾವೇಶದ ವೇದಿಕೆ ಕುಸಿದು ಕಾಂಗ್ರೆಸ್ನ ಕನಿಷ್ಠ 7 ನಾಯಕರು ಗಾಯಗೊಂಡಿದ್ದಾರೆ ಎಂದು ಶಾಸಕರೊಬ್ಬರು ತಿಳಿಸಿದ್ದಾರೆ.

ಮಧ್ಯಪ್ರದೇಶ ವಿಧಾನಸಭೆಗೆ ಕಾಲ್ನಡಿಗೆ ಮೂಲಕ ತೆರಳುವ ಮುನ್ನ ರಂಗಮಹಲ್ ಚೌಕಿ ಸಮೀಪ ನಡೆದ ಪ್ರತಿಭಟನಾ ಸಮಾವೇಶದಲ್ಲಿ ನಾಯಕರು ಭಾಷಣ ಮಾಡುತ್ತಿದ್ದಾಗ ವೇದಿಕೆ ಕುಸಿದಿದೆ ಎಂದು ಶಾಸಕ ಜೈವರ್ಧನ್ ಸಿಂಗ್ ತಿಳಿಸಿದ್ದಾರೆ.
.ಮಧ್ಯಪ್ರದೇಶ | ರೈತರಿಗೆ ₹5ಕ್ಕೆ ಶಾಶ್ವತ ವಿದ್ಯುತ್ ಸಂಪರ್ಕ: ಸಿಎಂ ಮೋಹನ್ ಯಾದವ್.
ರಾಜ್ಯ ಸರ್ಕಾರ ರೈತ ವಿರೋಧಿ ನಿಲುವುಗಳನ್ನು ವಿರೋಧಿಸಿ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಅದಾಗ್ಯೂ ಕಾಂಗ್ರೆಸ್ ಕಾರ್ಯಕರ್ತರು ವಿಧಾನಸಭೆಗೆ ಪಾದಯಾತ್ರೆ ನಡೆಸಿದ್ದು, ಅವರನ್ನು ಜಲಫಿರಂಗಿ ಹಾರಿಸುವ ಮೂಲಕ ಪೊಲೀಸರು ತಡೆದಿದ್ದಾರೆ.
.ಮಧ್ಯಪ್ರದೇಶ | ಟ್ರಕ್–ಎಸ್ಯುವಿ ಡಿಕ್ಕಿ: ಮೂವರು ಸಾವು, ಏಳು ಮಂದಿಗೆ ಗಾಯ.
‘ಸ್ಥಳದಲ್ಲಿ ನಾವು ಬ್ಯಾರಿಕೇಡ್ ಅಳವಡಿಸಿದ್ದು, ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ’ ಎಂದು ಭೋಪಾಲ್ ವಿಭಾಗ–1ರ ಹೆಚ್ಚುವರಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡವರ ಸಂಖ್ಯೆಯ ಬಗ್ಗೆ ಮಾಹಿತಿ ಪಡೆದು ತಿಳಿಸುತ್ತೇವೆ ಎಂದು ಎಡಿಜಿಪಿ ಹೇಳಿದ್ದಾರೆ. ಘಟನೆ ಸಂಬಂಧ ಮಾಹಿತಿ ಬಯಸಿ ಟಿಟಿ ನಗರ ಎಸಿಪಿ ಚಂದ್ರಶೇಖರ ಪಾಂಡೆ ಹಾಗೂ ಠಾಣಾಧಿಕಾರಿ ಸುಧೀರ್ ಅವರಿಗೆ ಕರೆ ಮಾಡಿದರೂ ಅವರು ಉತ್ತರಿಸಲಿಲ್ಲ.
.ಮಧ್ಯ ಪ್ರದೇಶ: 5,520 ಕೆ.ಜಿ ನಕಲಿ ತುಪ್ಪ ವಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.