ಲಾತೂರ್: ನಾಸಿಕ್‌ನಲ್ಲಿರುವ ಮಹಾರಾಷ್ಟ್ರ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಎಂಯುಎಚ್‌ಎಸ್) ವಿಭಾಗೀಯ ಕಚೇರಿ ಮರಾಠವಾಡ ಪ್ರದೇಶವಾಗಿರುವ ಲಾತೂರ್ ನಗರದಲ್ಲಿ ಆರಂಭವಾಗಲಿದೆ.

‘ಲಾತೂರ್‌ನಲ್ಲಿ ಆರೋಗ್ಯ ವಿಶ್ವವಿದ್ಯಾಲಯದ ವಿಭಾಗೀಯ ಕೇಂದ್ರ ಮಂಜೂರು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಮರಾಠವಾಡ ಪ್ರದೇಶ ಶೈಕ್ಷಣಿಕ ತಾಣವಾಗಿ ರೂಪುಗೊಳ್ಳಲಿದೆ‘ ಎಂದು ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ಸಚಿವ ಅಮಿತ್ ದೇಶಮುಖ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೇಶಮುಖ್, ಲಾತೂರ್ ಜಿಲ್ಲೆಯ ಉಸ್ತುವಾರಿ ಸಚಿವರು.

ಮಧ್ಯ ಮಹಾರಾಷ್ಟ್ರದಲ್ಲಿರುವ ಲಾತೂರ್ ನಗರದಲ್ಲಿ, ಆರೋಗ್ಯ, ಸಾರಿಗೆ, ಸಹಕಾರ, ದತ್ತಿ ಮತ್ತು ಜಲ ಸಂಪನ್ಮೂಲ ಸೇರಿದಂತೆ 25 ರಿಂದ 30 ಸರ್ಕಾರಿ ಇಲಾಖೆಗಳ ವಿಭಾಗೀಯ ಕಚೇರಿಗಳು ಇವೆ. ನಾಸಿಕ್ ನಗರದಲ್ಲಿ ಎಂಯುಎಚ್‌ಎಸ್ ಕಾರ್ಯಾರಂಭ ಮಾಡಿದೆ. ಅದರ ವಿಭಾಗೀಯ ಕೇಂದ್ರಗಳು ಮುಂಬೈ, ಪುಣೆ, ಔರಂಗಾಬಾದ್, ನಾಗಪುರ ಮತ್ತು ಕೊಲ್ಹಾಪುರದಲ್ಲಿವೆ.

‘ಈಗ ಔರಂಗಬಾದ್ ವಲಯದಿಂದ ವಿಭಾಗೀಯ ಕೇಂದ್ರವನ್ನು ಬೇರ್ಪಡಿಸಿ, ಲಾತೂರ್‌ನಲ್ಲಿ ತೆರೆಯಲಾಗುತ್ತಿದೆ‘ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.