ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ರಾಜಕೀಯ | ನಿಯಮ ಮೀರಿ ಅಧಿವೇಶನ: ಆರೋಪ

ರಾಜ್ಯಪಾಲರಿಗೆ ದೂರು ನೀಡಲು ಬಿಜೆಪಿ ತೀರ್ಮಾನ
Last Updated 30 ನವೆಂಬರ್ 2019, 18:49 IST
ಅಕ್ಷರ ಗಾತ್ರ

ಮುಂಬೈ: ಉದ್ಧವ್‌ ಠಾಕ್ರೆಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮತ್ತು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲಿ ನಿಯಮಗಳ ಪಾಲನೆ ಆಗಿಲ್ಲ ಎಂದು ಬಿಜೆಪಿ ಆರೋಪಿಸಿದೆ.

ಉದ್ಧವ್‌ ಅವರು ವಿಶ್ವಾಸಮತ ಯಾಚಿಸುವುದಕ್ಕೂ ಮುನ್ನ ಸಭಾತ್ಯಾಗ ನಡೆಸಿದ ಬಿಜೆಪಿಯವರು ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.

‘ಪ್ರಮಾಣವಚನ ಸ್ವೀಕರಿಸುವ ಮತ್ತು ವಿಧಾನಸಭೆಯ ಅಧಿವೇಶನ ಕರೆಯುವ ವಿಚಾರದಲ್ಲಿ ನಿಯಮಾವಳಿಗಳನ್ನು ಪಾಲಿಸಲಾಗಿಲ್ಲ. ಅದನ್ನು ಖಂಡಿಸಿ ನಾವು ಸಭಾತ್ಯಾಗ ಮಾಡುತ್ತಿದ್ದೇವೆ’ ಎಂದು ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್‌ ತಿಳಿಸಿದರು.

ಫಡಣವೀಸ್‌ ಹೇಳಿದ್ದು

* ವಿಶ್ವಾಸಮತ ಯಾಚನೆಗೂ ಮುನ್ನ ಹಂಗಾಮಿ ಸ್ಪೀಕರ್‌ ಅವರನ್ನು ಬದಲಿಸಿದ್ದು ತಪ್ಪು. ವಿಶ್ವಾಸಮತದಲ್ಲಿ ಸೋಲಾಗುವ ಭಯದಿಂದ ಈ ಕ್ರಮ ಕೈಗೊಳ್ಳಲಾಗಿದೆ

*ಕಳೆದ ಅಧಿವೇಶನದ ಕೊನೆಯ ದಿನ ರಾಷ್ಟ್ರಗೀತೆ ಹಾಡಿದ್ದರಿಂದ ಅಧಿವೇಶನವು ಮುಕ್ತಾಯವಾದಂತಾಗಿದೆ. ಹೊಸದಾಗಿ ಅಧಿವೇಶನ ನಡೆಸಬೇಕಾದರೆ, ರಾಜ್ಯಪಾಲರ ಮೂಲಕ ಸೂಚನೆ ಹೊರಡಿಸುವುದು ಅಗತ್ಯ, ಆದರೆ ಆದರೆ ಹಾಗೆ ಮಾಡಿಲ್ಲ.

* ಮುಖ್ಯಮಂತ್ರಿಯಾಗಲೀ ಸಚಿವರಾಗಲೀ ನಿಗದಿತ ಮಾದರಿಯಲ್ಲಿ ಪ್ರಮಾಣವಚನ ಸ್ವೀಕರಿಸಿಲ್ಲ

ಪಟೊಲೆ ಸ್ಪೀಕರ್‌ ಅಭ್ಯರ್ಥಿ

ಕಾಂಗ್ರೆಸ್‌ ಮುಖಂಡ, ನಾನಾ ಪಟೊಲೆ ಅವರನ್ನು ಸ್ಪೀಕರ್‌ ಹುದ್ದೆಯ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಮಹಾ
ವಿಕಾಸ ಆಘಾಡಿಯು ಬಿಜೆಪಿಗೆ ಕಠಿಣ ಸಂದೇಶ ರವಾನಿಸಿದೆ.

ಪಟೊಲೆ ಅವರು ಹಿಂದೆ ಭಂಡಾರಾ–ಗೊಂದಿಯಾ ಕ್ಷೇತ್ರದಿಂದ ಬಿಜೆಪಿಯ ಸಂಸದರಾಗಿದ್ದರು. ಮೋದಿ ವಿರುದ್ಧ ಸಿಡಿದೆದ್ದು, ಪಕ್ಷದಿಂದ ಹೊರಬಂದ ಮೊದಲ ಕೆಲವು ನಾಯಕರಲ್ಲಿ ಇವರೂ ಒಬ್ಬರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪಟೊಲೆ ಅವರು ಬಿಜೆಪಿಯ ಹಿರಿಯ ನಾಯಕ ನಿತಿನ್‌ ಗಡ್ಕರಿ ಅವರ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಆನಂತರ ಸಾಕೋಲಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT