ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್‌ ಧರ್ಮೀಯ ವಿವಾಹಗಳ ಮೇಲೆ ನಿಗಾ ಇಡಲು ಸಮಿತಿ ರಚಿಸಿದ ಮಹಾರಾಷ್ಟ್ರ ಸರ್ಕಾರ

ಅಂತರ್‌ ಧರ್ಮೀಯ ವಿವಾಹಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದೆ ಮಹಾರಾಷ್ಟ್ರ ಸರ್ಕಾರ
Last Updated 16 ಡಿಸೆಂಬರ್ 2022, 2:34 IST
ಅಕ್ಷರ ಗಾತ್ರ

ಮುಂಬೈ: ಅಂತರ್ ಧರ್ಮೀಯ ವಿವಾಹಗಳ ಮೇಲೆ ನಿಗಾ ವಹಿಸಲು ಮಹಾರಾಷ್ಟ್ರ ಸರ್ಕಾರವು 13 ಸದಸ್ಯರ ಸಮಿತಿಯೊಂದನ್ನು ರಚಿಸಿದೆ.

ಅಂತರ್ ಧರ್ಮೀಯ ವಿವಾಹವಾದ ಜೋಡಿ ಹಾಗೂ ಅವರ ಕುಟುಂಬದವರ ಬಗ್ಗೆ ನಿಗಾ ವಹಿಸುವುದು, ಮಾಹಿತಿಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು ಈ ಸಮಿತಿಯ ಜವಾಬ್ದಾರಿಯಾಗಿರಲಿದೆ.

ಮಹಾರಾಷ್ಟ್ರದ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸಚಿವ ಪ್ರಭಾತ್‌ ಲೋಧಾ ಅವರ ನೇತೃತ್ವದಲ್ಲಿ ರಾಜ್ಯ ಮಟ್ಟದ ‘ಅಂತರ್‌ ಧರ್ಮೀಯ ವಿವಾಹ – ಕುಟುಂಬ ಸಮನ್ವಯ ಸಮಿತಿ‘ ರಚನೆ ಮಾಡಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರದ ಪ್ರಕಟಣೆ ತಿಳಿಸಿದೆ.

ರಾಜ್ಯ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಈ ಆದೇಶ ಹೊರಡಿಸಿದೆ.

ಈ ಸಮಿತಿಯಲ್ಲಿ ಸಚಿವ ಲೋಧಾ ಇರಲಿದ್ದು, ಇಲಾಖೆಯ ಉಪ ಆಯುಕ್ತರು, ಸದಸ್ಯ ಕಾರ್ಯದರ್ಶಿಯಾಗಿರಲಿದ್ದಾರೆ.

ಅಂತರ್‌ ಧರ್ಮೀಯ ವಿವಾಹವಾಗುವ ಜೋಡಿಗಳಿಗೆ ಸಹಾಯವಾಣಿ ಕೂಡ ತೆರೆಯಲಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಅಂತರ್‌ ಧರ್ಮೀಯ ಜೋಡಿಗಳು ಓಡಿ ಹೋದ ಬಳಿಕ ಅಥವಾ ಧಾರ್ಮಿಕ ಸ್ಥಳಗಳಲ್ಲಿ ನಡೆದ ನೋಂದಾಯಿತ ಅಥವಾ ನೋಂದಾಯಿಸದೇ ಇರುವ ವಿವಾಹಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.

ಒಂದು ವೇಳೆ ಅಂತರ್‌ ಧರ್ಮೀಯ ವಿವಾಹವಾಗಬಯಸುವ ಮಹಿಳೆಗೆ ಕೌನ್ಸೆಲಿಂಗ್‌ ಅಗತ್ಯ ಇದ್ದರೂ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT