ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಡಿಶಾ: ದೋಣಿ ಮುಳುಗಿ 2 ಸಾವು, 7 ಮಂದಿ ನಾಪತ್ತೆ

Published : 19 ಏಪ್ರಿಲ್ 2024, 15:09 IST
Last Updated : 19 ಏಪ್ರಿಲ್ 2024, 15:09 IST
ಫಾಲೋ ಮಾಡಿ
Comments

ಭುವನೇಶ್ವರ: ಒಡಿಶಾದ ಮಹಾನದಿಯಲ್ಲಿ ಶುಕ್ರವಾರ ದೋಣಿಯೊಂದು ಮಗುಚಿಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು, 7 ಮಂದಿ ನಾಪತ್ತೆಯಾಗಿದ್ದಾರೆ.

‘ಪಥರ್ಸೇನಿ ಕುಡಾದಿಂದ ಬಂಜಿಪಲ್ಲಿಗೆ ತೆರಳುತ್ತಿದ್ದ, 50 ಜನರನ್ನು ಹೊತ್ತಿದ್ದ ದೋಣಿಯು ಸರದಾ ಘಾಟ್‌ ಬಳಿ ಮುಳುಗಡೆಯಾಗಿದೆ’ ಎಂದು ಪೊಲೀಸರು‌ ತಿಳಿಸಿದ್ದಾರೆ.

ಸ್ಥಳೀಯ ಮೀನುಗಾರರು 35 ಪ್ರಯಾಣಿಕರ‌ನ್ನು ರಕ್ಷಿಸಿದ್ದು, ಬಳಿಕ ಆಗಮಿಸಿದ ರಕ್ಷಣಾ ಸಿಬ್ಬಂದಿ 7 ಜನ ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡಿದ್ದಾರೆ. 

‘7 ಜನ ಪ್ರಯಾಣಿಕರು ನಾಪತ್ತೆಯಾಗಿದ್ದು, ಶೋಧಕಾರ್ಯ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT