ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪವಾಸ ಸತ್ಯಾಗ್ರಹ: ಜರಾಂಗೆ ಎಚ್ಚರಿಕೆ

Published 5 ಫೆಬ್ರುವರಿ 2024, 16:11 IST
Last Updated 5 ಫೆಬ್ರುವರಿ 2024, 16:11 IST
ಅಕ್ಷರ ಗಾತ್ರ

ಜಾಲ್ನಾ: ಮರಾಠ ಸಮುದಾಯಕ್ಕೆ ಒಬಿಸಿ ಪ್ರವರ್ಗದಲ್ಲಿ ಮೀಸಲಾತಿ ನೀಡಬೇಕು ಎಂಬ ಆಗ್ರಹದೊಂದಿಗೆ ಹೋರಾಟ ನಡೆಸುತ್ತಿರುವ ಮನೋಜ್ ಜರಾಂಗೆ ಅವರು, ಕಳೆದ ತಿಂಗಳು ಹೊರಡಿಸಿರುವ ಕರಡು ಅಧಿಸೂಚನೆಯಲ್ಲಿ ಇರುವ ‘ರಕ್ತಸಂಬಂಧಿಗಳು’ ಎಂಬ ಪದದ ಅರ್ಥವ್ಯಾಪ್ತಿಯ ಬಗ್ಗೆ ವಿವರಣೆ ನೀಡಲು ಸರ್ಕಾರ ವಿಫಲವಾದಲ್ಲಿ ಫೆಬ್ರುವರಿ 10ರಿಂದ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ತಾನು ಕುಣಬಿ ಸಮುದಾಯಕ್ಕೆ ಸೇರಿದವ ಎನ್ನಲು ದಾಖಲೆಗಳನ್ನು ಹೊಂದಿರುವ ಮರಾಠ ಸಮುದಾಯದ ವ್ಯಕ್ತಿಯ ರಕ್ತಸಂಬಂಧಿಗಳನ್ನು ಕೂಡ ಕುಣಬಿ ಎಂದೇ ಪರಿಗಣಿಸುವುದಾಗಿ ಸರ್ಕಾರ ಹೇಳಿದೆ. ಕುಣಬಿ ಸಮುದಾಯವನ್ನು ಮಹಾರಾಷ್ಟ್ರದಲ್ಲಿ ಒಬಿಸಿ ಎಂದು ಪರಿಗಣಿಸಲಾಗಿದೆ. ಮಹಾರಾಷ್ಟ್ರದ ಮರಾಠರೆಲ್ಲರಿಗೂ ಕುಣಬಿ ಜಾತಿ ಪ್ರಮಾಣಪತ್ರ ನೀಡಬೇಕು ಎಂದು ಜರಾಂಗೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT