ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಉಲ್ಲಂಘಿಸಿದರೆ ವೈದ್ಯಕೀಯ ಕಾಲೇಜುಗಳಿಗೆ ₹ 1 ಕೋಟಿ ದಂಡ: ಎನ್‌ಎಂಸಿ

Published 30 ಸೆಪ್ಟೆಂಬರ್ 2023, 15:56 IST
Last Updated 30 ಸೆಪ್ಟೆಂಬರ್ 2023, 15:56 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ನಿಯಮಗಳು ಹಾಗೂ ಶಾಸನಬದ್ಧ ನಿಯಮಗಳನ್ನು ಪಾಲಿಸದಿರುವ ವೈದ್ಯಕೀಯ ಕಾಲೇಜುಗಳಿಗೆ, ಇನ್ನು ಮುಂದೆ ಪ್ರತಿ ನಿಯಮ ಉಲ್ಲಂಘನೆಗೆ ₹ 1 ಕೋಟಿವರೆಗೂ ದಂಡ ವಿಧಿಸಬಹುದಾಗಿದೆ.

ಇದೂ ಸೇರಿದಂತೆ ವಿವಿಧ ನಿಯಮಗಳ ಕುರಿತು ಆಯೋಗವು ಸೆ. 27ರಂದು ಅಧಿಸೂಚನೆ ಹೊರಡಿಸಿದೆ. ರೋಗಿಗಳ ಕುರಿತ ಸುಳ್ಳುದಾಖಲೆ ಮತ್ತು ಕಡತವನ್ನು ಒದಗಿಸುವ ವೈದ್ಯಕೀಯ ಕಾಲೇಜುಗಳ ವಿಭಾಗಗಳ ಮುಖ್ಯಸ್ಥರು, ಡೀನ್‌ಗಳು, ನಿರ್ದೇಶಕರು, ವೈದ್ಯರಿಗೆ ₹ 5 ಲಕ್ಷದವರೆಗೂ ದಂಡ ವಿಧಿಸಲು ಅವಕಾಶವಿದೆ.

ಅಲ್ಲದೆ, ದುರ್ನಡತೆಗಾಗಿ ನೋಂದಾಯಿತ ವೈದ್ಯರು (ವೃತ್ತಿಪರ ನಡತೆ) ನಿಯಮಗಳು ಹಾಗೂ ವೈದ್ಯಕೀಯ ಶಿಕ್ಷಣ ಗುಣಮಟ್ಟ ನಿರ್ವಹಣೆ ನಿಯಮಗಳ (2023) ಅನ್ವಯವೂ ದಂಡ ವಿಧಿಸಬಹುದು ಎಂದು ತಿಳಿಸಿದೆ.

ಹೊಸ ನಿಯಮದ ಅನುಸಾರ, ವೈದ್ಯಕೀಯ ಕಾಲೇಜುಗಳು ನಿಯಮಗಳನ್ನು ಪಾಲಿಸದಿದ್ದಲ್ಲಿ ಆಯೋಗವು ಕಾಲೇಜಿಗೆ ನೀಡಿರುವ ಮಾನ್ಯತೆಯನ್ನು ಐದು ಶೈಕ್ಷಣಿಕ ವರ್ಷಗಳವರೆಗೂ ತಡೆಹಿಡಿಯಬಹುದಾಗಿದೆ.

ವ್ಯಕ್ತಿಗತವಾಗಿ ಅಥವಾ ಏಜೆನ್ಸಿಗಳ ಮೂಲಕ ವೈದ್ಯಕೀಯ ಪದವಿ ಪರೀಕ್ಷಾ ಮಂಡಳಿ (ಯುಜಿಎಂಇಬಿ), ಸ್ನಾತಕೋತ್ತರ ವೈದ್ಯಕೀಯ ಪದವಿ ಪರೀಕ್ಷಾ ಮಂಡಳಿ (ಪಿಜಿಎಂಇಬಿ) ಅಥವಾ ಎನ್ಎಂಸಿಯ ಮೇಲೆ ಪ್ರಭಾವವನ್ನು ಬೀರಲು ಯತ್ನಿಸಿದರೆ ನಿರ್ದಿಷ್ಟ ಕಾಲೇಜಿನ ಅರ್ಜಿಗಳು, ಮನವಿಗಳಿಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನು ತಕ್ಷಣವೇ ಸ್ಥಗಿತಗೊಳಿಸಲೂ ಆಯೋಗಕ್ಕೆ ಅಧಿಕಾರವಿದೆ ಎಂದು ನಿಯಮ ರೂಪಿಸಲಾಗಿದೆ.

ಹೊಸ ನಿಯಮಗಳ ಅನುಸಾರ, ವೈದ್ಯಕೀಯ ಕಾಲೇಜುಗಳು ವಾರ್ಷಿಕ ವರದಿ ಸಲ್ಲಿಸುವುದು ಕಡ್ಡಾಯ. ಈ ಮೂಲಕ ಎಲ್ಲ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂಬುದು ದೃಢಪಡಿಸಬೇಕಾಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾಯ್ದೆಯ ಒಟ್ಟಾರೆ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಆಯಾ ಪರೀಕ್ಷಾ ಮಂಡಳಿಗಳು ಈ ವರದಿಯ ಮೌಲ್ಯಮಾಪನ ಮಾಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT