ವಿಬಿ–ಜಿ ರಾಮ್ ಜಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ಅಂಕಿತ ಹಾಕಿದರು ಎಂದು ಗ್ರಾಮೀಣ ಅಭಿವೃದ್ಧಿ ಇಲಾಖೆ ತಿಳಿಸಿದೆ. ವಿರೋಧ ಪಕ್ಷಗಳ ಪ್ರತಿಭಟನೆ ಮಧ್ಯೆಯೇ ಸಂಸತ್ತಿನಲ್ಲಿ ಗುರುವಾರ ಮಸೂದೆಯನ್ನು ಅಂಗೀಕರಿಸಲಾಗಿತ್ತು. ನರೇಗಾ ಯೋಜನೆಗೆ ಪರ್ಯಾಯವಾದ ನೂತನ ಮಸೂದೆಯು ಗ್ರಾಮೀಣ ಜನರಿಗೆ ವಾರ್ಷಿಕ 125 ದಿನಗಳ ಉದ್ಯೋಗದ ಖಾತರಿಯನ್ನು ನೀಡುತ್ತದೆ.