ಠಾಣೆ: ಮರಾಠಿ ಅಸ್ಮಿತೆಗಾಗಿ ಮೀರಾ ಭಾಯಂದರ್ ನಗರದಲ್ಲಿ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎಸ್ಎಸ್) ಹಲವು ನಾಯಕರು ಮತ್ತು ಕಾರ್ಯಕರ್ತರನ್ನು ಮಾರ್ಗಮಧ್ಯೆಯೇ ಪೊಲೀಸರು ಮಂಗಳವಾರ ವಶಕ್ಕೆ ಪಡೆದರು.

ಮರಾಠಿ ಏಕೀಕರಣ ಸಮಿತಿ ಆಯೋಜಿಸಿದ್ದ ರ್ಯಾಲಿಯಲ್ಲಿ ಭಾಗವಹಿಸಲು ನೆರೆದಿದ್ದ ಪ್ರತಿಭಟನಕಾರರ ಸುತ್ತ ಪೊಲೀಸರು ಸುತ್ತುವರಿದರು. ನಂತರ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಮಹಿಳೆಯರು ಸೇರಿದಂತೆ ಎಂಎನ್ಎಸ್ ಕಾರ್ಯಕರ್ತರನ್ನು ಪೊಲೀಸ್ ವ್ಯಾನ್ ಒಳಗೆ ತುಂಬುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಎಷ್ಟು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಪ್ರತಿಭಟನಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು, ರ್ಯಾಲಿಗೆ ಅವಕಾಶ ನೀಡದ ಸರ್ಕಾರವನ್ನು ಟೀಕಿಸಿದರು.

ನಾಟಕೀಯ ಬೆಳವಣಿಗೆ ಮಧ್ಯೆಯೇ ಶಿವಸೇನಾ (ಯುಬಿಟಿ), ಎನ್ಸಿಪಿ (ಎಸ್ಪಿ) ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರೂ ಪ್ರತಿಭಟನೆಯಲ್ಲಿ ಭಾಗಿಯಾದರು. ಈ ಪೈಕಿ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.

ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದ ರಾಜ್ಯ ಸಚಿವ ಪ್ರತಾಪ್ ಸರನಾಯ್ಕ್ ಅವರನ್ನು ಪ್ರತಿಭಟನಕಾರರು ಪ್ರಶ್ನಿಸಿ ಇಕ್ಕಟ್ಟಿಗೆ ಸಿಲುಕಿಸಿದರು.

ನಂತರ ಮಾತನಾಡಿದ ಪ್ರತಾಪ್ ಸರನಾಯ್ಕ್ ಅವರು, ‘ಪೊಲೀಸರ ಈ ಕ್ರಮ ‘ತಪ್ಪು’. ಅವರು ಸರ್ಕಾರದ ನಿರ್ದೇಶನಗಳನ್ನು ಪಾಲಿಸಿಲ್ಲ’ ಎಂದು ಹೇಳಿದರು.

‘ಮರಾಠಿ ಜನರ ಹಿತಾಸಕ್ತಿಯನ್ನು ಬೆಂಬಲಿಸುವ ರ್ಯಾಲಿಯನ್ನು ಹತ್ತಿಕ್ಕುವಂತೆ ಸರ್ಕಾರ ಯಾವುದೇ ನಿರ್ದೇಶನಗಳನ್ನು ನೀಡಿರಲಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುತ್ತೇನೆ’ ಎಂದರು.

ರ್ಯಾಲಿಯಲ್ಲಿ ಪಾಲ್ಗೊಳ್ಳುವುದನ್ನು ತಡೆಯಲು ಮಧ್ಯರಾತ್ರಿಯಿಂದಲೇ ಹಲವು ಪ್ರತಿಭಟನಕಾರರನ್ನು ಸಭಾಭವನವೊಂದರಲ್ಲಿ ಕೂಡಿ ಹಾಕಲಾಗಿತ್ತು ಎಂಬ ವರದಿಯನ್ನು ಪೊಲೀಸರು ಖಚಿತಪಡಿಸಿದರು.

ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಆದರೆ ಸಭಾಭವನದಲ್ಲಿ ಕೂಡಿ ಹಾಕಿದ ಬಗ್ಗೆ ಅವರು ಯಾವುದೇ ಹೇಳಿಕೆ ನೀಡಲಿಲ್ಲ.

ಈ ಮಧ್ಯೆ ಪ್ರತಿಭಟನಾ ಮೆರವಣಿಗೆಗೆ ಅನುಮತಿ ಪಡೆಯಲಾಗಿತ್ತು ಎಂಬ ವಾದವನ್ನು ಪೊಲೀಸರು ಅಲ್ಲಗಳೆದರು. ನಾಟಕೀಯ ಬೆಳವಣಿಗೆ ಮತ್ತು ರಾಜಕೀಯ ಮಧ್ಯಪ್ರವೇಶದ ನಂತರ ಆಯೋಜಕರು ಮೊದಲಿಗೆ ತಿಳಿಸಿದ್ದ ಮಾರ್ಗದಲ್ಲಿ ರ್ಯಾಲಿ ನಡೆಸಲಾಯಿತು.

ಪ್ರತಿಭಟನಾ ಸ್ಥಳಕ್ಕೆ ತೆರಳುವ ಮುನ್ನವೇ ಪ್ರತಿಭಟನಕಾರರನ್ನು ತಡೆಯಲಾಗಿದೆ. ಇದು ಪ್ರಜಾಪ್ರಭುತ್ವವಲ್ಲ
ರವೀಂದ್ರ ಮೋರೆ, ಎಂಎನ್ಎಸ್ ಠಾಣೆ ಘಟಕದ ಅಧ್ಯಕ್ಷ

ರ್ಯಾಲಿಗೆ ವಿರೋಧವಿಲ್ಲ ಮಾರ್ಗಕ್ಕೆ ವಿರೋಧ: ಫಡಣವೀಸ್

ಮುಂಬೈ: ‘ಮೀರಾ ಭಾಯಂದರ್ನಲ್ಲಿ ಪ್ರತಿಭಟನಾ ರ್ಯಾಲಿ ನಡೆಸಲು ಅನುಮತಿ ನೀಡಲಾಗಿತ್ತು. ಈ ರ್ಯಾಲಿಯಲ್ಲಿ ಎಂಎನ್ಎಸ್ ಕಾರ್ಯಕರ್ತರು ಪಾಲ್ಗೊಳ್ಳಲು ನಿರ್ಧರಿಸಿದ್ದರು. ಆದರೆ ರ್ಯಾಲಿಯು ನಿರ್ದಿಷ್ಟ ಹಾದಿಯ ಮೂಲಕವೇ ಸಾಗಬೇಕು ಎಂದು ಪಕ್ಷವು ಪಟ್ಟುಹಿಡಿದಿತ್ತು. ಆದರೆ ಅದು ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುವ ಮಾರ್ಗವಾಗಿತ್ತು’ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ತಿಳಿಸಿದರು. ‘ರ್ಯಾಲಿ ನಡೆಸಲು ವಿರೋಧ ಇಲ್ಲ. ಆದರೆ ಆ ಮಾರ್ಗದಲ್ಲಿ ರ್ಯಾಲಿಗೆ ಅನುಮತಿ ನೀಡುವುದು ಕಷ್ಟ. ಮಾರ್ಗ ಬದಲಿಸಲು ಪೊಲೀಸರು ಮನವಿ ಮಾಡಿಕೊಂಡರೂ ಅವರು ಪಟ್ಟು ಸಡಿಲಿಸಲಿಲ್ಲ’ ಎಂದು ತಿಳಿಸಿದರು. ಎಂಎನ್ಎಸ್ ನಾಯಕ ಸಂದೀಪ್ ದೇಶಪಾಂಡೆ ಅವರು ‘ಸರ್ಕಾರ ನಮ್ಮ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುತ್ತಿದೆ’ ಎಂದು ಆರೋಪಿಸಿದರು.

ದುಬೆ ಹೇಳಿಕೆಗೆ ಖಂಡನೆ

ಮುಂಬೈ: ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಮುಂಬೈನಲ್ಲಿ ಹಿಂದಿ ಭಾಷಿಕರ ವಿರುದ್ಧ ನಡೆದ ಹಲ್ಲೆಯನ್ನು ಖಂಡಿಸುತ್ತಾ ‘ನಿಮ್ಮನ್ನು ಹೊಡೆದು ಸಾಯಿಸುತ್ತೇವೆ’ (ಪಟಕ್ ಪಟಕ್ ಕೆ ಮಾರೇಂಗೆ) ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ದುಬೆ ಅವರು ‘ನೀವು ನಮ್ಮ ಹಣದಲ್ಲಿ ಬದುಕುತ್ತಿದ್ದೀರಿ. ನಿಮ್ಮ ಬಳಿ ಯಾವ ಕೈಗಾರಿಕೆಗಳಿವೆ? ಟಾಟಾ ಬಿರ್ಲಾ ಅಂಬಾನಿಯವರು ಇಲ್ಲಿ ಉದ್ಯಮ ನಡೆಸುತ್ತಿದ್ದಾರೆ. ನೀವು ಹಿಂದಿ ಭಾಷಿಕರನ್ನು ಹೊಡೆಯುವಷ್ಟು ದೊಡ್ಡವರಾಗಿದ್ದರೆ ಉರ್ದು ತಮಿಳು ಮತ್ತು ತೆಲುಗು ಭಾಷಿಕರನ್ನೂ ಹೊಡೆಯುವ ಧೈರ್ಯ ನಿಮಗಿರಬೇಕು. ನೀವು ಅಷ್ಟೊಂದು ‘ದೊಡ್ಡ ಜನ’ರಾಗಿದ್ದರೆ ಮಹಾರಾಷ್ಟ್ರದಿಂದ ಹೊರಗೆ ಬಿಹಾರ ಉತ್ತರ ಪ್ರದೇಶ ಅಥವಾ ತಮಿಳುನಾಡಿಗೆ ಬನ್ನಿ. ನಾವು ನಿಮ್ಮನ್ನು ಹೊಡೆದು ಸಾಯಿಸುತ್ತೇವೆ’ ಎಂದು ಹೇಳಿದ್ದಾರೆ.

ಇಂಥ ಹೇಳಿಕೆ ಸರಿಯಲ್ಲ: ಫಡಣವೀಸ್

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ದೇವೆಂದ್ರ ಫಡಣವೀಸ್ ‘ದುಬೆ ಅವರು ಒಂದು ಸಂಘಟನೆ ಬಗ್ಗೆ ಈ ಮಾತುಗಳನ್ನು ಹೇಳಿದ್ದಾರೆಯೇ ಹೊರತು ಮರಾಠಿ ಜನರಿಗೆ ಹೇಳಿದ್ದಲ್ಲ. ಆದರೆ ಇಂಥ ಹೇಳಿಕೆ ನೀಡುವುದು ಸರಿಯಲ್ಲ. ಈ ಮಾತುಗಳು ಜನರಲ್ಲಿ ಗೊಂದಲವನ್ನು ಉಂಟುಮಾಡುತ್ತದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.