ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರದಲ್ಲಿ ಶೀಘ್ರವೇ ಇಂಟರ್‌ನೆಟ್ ಸೇವೆ ಪುನರಾರಂಭ: ಸಿಎಂ ಬಿರೇನ್ ಸಿಂಗ್

ಇಂಟರ್‌ನೆಟ್ ಸ್ಥಗಿತದಿಂದಾಗಿ ಜನರ ಕಷ್ಟ ನನಗೆ ಅರ್ಥವಾಗಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಸೇವೆಗಳನ್ನು ಮರು ಸ್ಥಾಪಿಸಲಾಗುವುದು– ಮಣಿಪುರ ಸಿಎಂ ಬಿರೇನ್ ಸಿಂಗ್.
Published 19 ಅಕ್ಟೋಬರ್ 2023, 2:44 IST
Last Updated 19 ಅಕ್ಟೋಬರ್ 2023, 2:44 IST
ಅಕ್ಷರ ಗಾತ್ರ

ಇಂಫಾಲ: ಮುಂದಿನ ನಾಲ್ಕೈದು ದಿನಗಳಲ್ಲಿ ರಾಜ್ಯದಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆಗಳನ್ನು ಪುನರಾರಂಭ ಮಾಡಲಾಗುವುದು ಎಂದು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಹೇಳಿದ್ದಾರೆ.

ಕ್ಯಾಬಿನೆಟ್ ಸಭೆಯ ಬಳಿಕ ನಾಗಾ ಪ್ರಾಬಲ್ಯದ ಉಖ್ರುಲ್ ಜಿಲ್ಲೆಯ ಮಿನಿ ಸೆಕ್ರೆಟರಿಯೇಟ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂಗ್, 'ಮೊಬೈಲ್ ಇಂಟರ್ನೆಟ್ ನಿಷೇಧದಿಂದಾಗಿ ಜನರ ಕಷ್ಟಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಕೆಲವು ಅಂಶಗಳು ಯಾವಾಗಲೂ ಪರಿಸ್ಥಿತಿಯ ಲಾಭವನ್ನು ಪಡೆಯಲು ಮತ್ತು ಸಮಸ್ಯೆಯನ್ನು ಸೃಷ್ಟಿಸಲು ಯತ್ನಿಸುವ ಕಾರಣ ಸರ್ಕಾರ ಆ ನಿರ್ಧಾರ ತೆಗೆದುಕೊಂಡಿತ್ತು. ಮುಂದಿನ ನಾಲ್ಕೈದು ದಿನಗಳಲ್ಲಿ ಸೇವೆಗಳನ್ನು ಮರು ‌‌ಸ್ಥಾಪಿಸಲಾಗುವುದು' ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT