ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿ‍ಪುರ: ಮೊಬೈಲ್‌ ಇಂಟರ್‌ನೆಟ್‌ ಸೇವೆ ಪುನರಾರಂಭ

Published 23 ಸೆಪ್ಟೆಂಬರ್ 2023, 13:44 IST
Last Updated 23 ಸೆಪ್ಟೆಂಬರ್ 2023, 13:44 IST
ಅಕ್ಷರ ಗಾತ್ರ

ಇಂಫಾಲ್‌: ಮೈತೇಯಿ ಮತ್ತು ಕುಕಿ ಬುಡಕಟ್ಟು ಸಮುದಾಯದ ನಡುವಿನ ಹಿಂಸಾಚಾರದಿಂದಾಗಿ ಮಣಿಪುರದಲ್ಲಿ ಮೇ 3ರಿಂದ ನಿರ್ಬಂಧ ಹೇರಿದ್ದ ಮೊಬೈಲ್‌ ಇಂಟರ್‌ನೆಟ್‌ ಸೇವೆಯು ಶನಿವಾರ ಪುನರಾರಂಭಗೊಂಡಿದೆ.

‘ಸುಳ್ಳುಸುದ್ದಿ, ಅಪಪ್ರಚಾರ ಹಾಗೂ ದ್ವೇಷ ಭಾಷಣಕ್ಕೆ ಕಡಿವಾಣ ಹಾಕಲು ಮೊಬೈಲ್‌ ಇಂಟರ್‌ನೆಟ್‌ ಸೇವೆಯ ಬಳಕೆ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ಸದ್ಯ ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸಿದೆ. ಹಾಗಾಗಿ, ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಮುಖ್ಯಮಂತ್ರಿ ಎನ್‌. ಬಿರೇನ್ ಸಿಂಗ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮಣಿಪುರಕ್ಕೆ ಹೊಂದಿಕೊಂಡಂತೆ 16 ಕಿ.ಮೀ. ಉದ್ದದ ಭಾರತ–ಮ್ಯಾನ್ಮಾರ್ ಗಡಿ ಪ್ರದೇಶವಿದೆ. ಯಾವುದೇ ಸೂಕ್ತ ದಾಖಲೆ ಪತ್ರಗಳಿಲ್ಲದೆ ಗಡಿ ಭಾಗದ ಎರಡೂ ಪ್ರದೇಶಗಳಲ್ಲಿ ನಾಗರಿಕರ ಸಂಚಾರಕ್ಕೆ ಕಡಿವಾಣ ಹಾಕಲಾಗಿದೆ’ ಎಂದರು. 

‘ಕಣಿವೆ ರಾಜ್ಯದೊಳಗೆ ಅಕ್ರಮವಾಗಿ ನುಸುಳುವ ವಲಸಿಗರ ತಡೆಗೆ ಸರ್ಕಾರ ಕ್ರಮವಹಿಸಲಿದೆ. 60 ಕಿ.ಮೀ. ಉದ್ದದ ಅಂತರರಾಷ್ಟ್ರೀಯ ಗಡಿ ರೇಖೆಯ ಉದ್ದಕ್ಕೂ ತಂತಿಬೇಲಿ ಅಳವಡಿಸಬೇಕಿದೆ. ಕೇಂದ ಗೃಹ ಸಚಿವಾಲಯವು ಈ ನಿಟ್ಟಿನಲ್ಲಿ ಕ್ರಮವಹಿಸಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT