ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸರ್ಕಾರ ದೇಶದ ಸಾರ್ವಜನಿಕ ವಲಯ ಉದ್ಯಮಗಳನ್ನು ಹಾಳುಗೆಡವಿದೆ: ಮಲ್ಲಿಕಾರ್ಜುನ ಖರ್ಗೆ

Published 17 ಜೂನ್ 2023, 9:34 IST
Last Updated 17 ಜೂನ್ 2023, 9:34 IST
ಅಕ್ಷರ ಗಾತ್ರ

ನವದೆಹಲಿ: 'ಮೋದಿ ಸರ್ಕಾರ ಸಾರ್ವಜನಿಕ ವಲಯದ ಉದ್ಯಮಗಳನ್ನು(ಪಿಎಸ್‌ಯು) ಹಾಳುಗೆಡುವುತ್ತಿದೆ. ಆ ಮೂಲಕ ಲಕ್ಷಾಂತರ ಸರ್ಕಾರಿ ಉದ್ಯೋಗಗಳನ್ನು ಜನರಿಂದ ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ' ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಖರ್ಗೆ, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 'ಲಕ್ಷಾಂತರ ಉದ್ಯೋಗಗಳನ್ನು ಕಸಿದುಕೊಳ್ಳುವ, ಸಾರ್ವಜನಿಕ ವಲಯದ ಉದ್ಯಮಗಳನ್ನು ಹಾಳುಗೆಡವಿರುವುದು ಯಾವ ಟೂಲ್‌ ಕಿಟ್‌ನ ಭಾಗವಾಗಿದೆ ಹೇಳಿ' ಎಂದು ಪ್ರಧಾನಿ ಮೋದಿ ಅವರಲ್ಲಿ ಕೇಳಿದ್ದಾರೆ.

'ಸಾರ್ವಜನಿಕ ವಲಯದ ಉದ್ಯಮಗಳು ದೇಶದ ಆರ್ಥಿಕತೆಯ ಪ್ರಮುಖ ಭಾಗವೆಂಬುವುದರಲ್ಲಿ ಮೋದಿ ಸರ್ಕಾರಕ್ಕೆ ನಂಬಿಕೆಯಿಲ್ಲ. ಕೇಂದ್ರ ಸರ್ಕಾರದ ಇಮೇಜ್‌ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ‘ಮೇಕ್‌ ಇನ್‌ ಇಂಡಿಯಾ' ಯೋಜನೆಯನ್ನು ತರಲಾಯಿತು. ಇದರಿಂದ ದೇಶ ಏನು ಪಡೆಯಿತು?' ಎಂದು ಪ್ರಶ್ನಿಸಿದರು.

'ಮೋದಿ ನೇತೃತ್ವದ ಸರ್ಕಾರ ಏಳು ಸಾರ್ವಜನಿಕ ವಲಯ ಉದ್ಯಮಗಳಿಂದ ಸುಮಾರು 3.84 ಲಕ್ಷ ಉದ್ಯೋಗಗಳನ್ನು ಕಸಿದುಕೊಂಡಿರುವುದು ಏಕೆ? ಕೇಂದ್ರ ಸರ್ಕಾರದಲ್ಲಿ ಮಹಿಳೆಯರ ಉದ್ಯೋಗಗಳು ಶೇಕಡಾ 42ರಷ್ಟು ಕಡಿಮೆಯಾಗಿರುವುದು ಯಾಕೆ? ಗುತ್ತಿಗೆ ಆಧಾರದ ಉದ್ಯೋಗಗಳು ಶೇ.88ರಷ್ಟು ಹೆಚ್ಚಳವಾಗಿರುವುದು ಹೇಗೆ?' ಎಂದು ಕೇಳಿದ ಖರ್ಗೆ ಅನೇಕ ಪ್ರಶ್ನೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ.

ಟ್ವೀಟ್‌ ಜೊತೆಗೆ ಒಂದೂವರೆ ನಿಮಿಷಗಳ ವಿಡಿಯೊ ಹಂಚಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ, 2013ರಿಂದ 2022ರವರೆಗೆ ಹಲವಾರು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಆಗಿರುವ ಉದ್ಯೋಗ ನಷ್ಟದ ವಿವರಗಳನ್ನು ವಿಡಿಯೊದಲ್ಲಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT